ಕಂದಕ್: ಮೀಲಾದುನ್ನಬಿ ಮೆರವಣಿಗೆನಿರತರಿಗೆ ಸಿಹಿತಿಂಡಿ, ತಂಪು ಪಾನೀಯ ವಿತರಿಸಿದ ಹಿಂದೂ ಸಂಘಟನೆಗಳು

Update: 2018-11-20 06:41 GMT

ಮಂಗಳೂರು, ನ.20: ನಗರದ ನಿತ್ಯಾನಂದ ಆಶ್ರಮ ಹಾಗೂ ಯುವಶಕ್ತಿ ಫ್ರೆಂಡ್ಸ್ ಮತ್ತು ತುಳುನಾಡ ಸಂಜೀವಿನಿ ಸಂಘಟನೆಗಳ ವತಿಯಿಂದ ಬಂದರ್ ನ ಕಂದಕ್ ಬಳಿಯ ಗೂಡ್ಸ್ ಶೆಡ್ ನಿರೇಶ್ವಾಲ್ಯದಲ್ಲಿ ಮೀಲಾದುನ್ನಬಿ ಪ್ರಯುಕ್ತ ಮೆರವಣಿಗೆ ನಡೆಸಿದ ಮುಸ್ಲಿಮರಿಗೆ ಸಿಹಿ ತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ತುಳುನಾಡ ಸಂಜೀವಿನಿಯ ಸ್ಥಾಪಕಾಧ್ಯಕ್ಷ ಮಹೇಂದ್ರ ಕಾಶಿ, ಹೊರನಾಡಿನಲ್ಲಿ ಮಂಗಳೂರು ಸದಾ ಕೋಮು ಸಂಘರ್ಷ ನಡೆಯುತ್ತಿರುವ ಪ್ರದೇಶ ಎಂಬ ಭಾವನೆ ಇದೆ. ಆದರೆ ಇಲ್ಲಿ ನಾವೆಲ್ಲ ಸಹೋದರತೆಯಿಂದ, ಸೌಹಾರ್ದದಿಂದ ಬಾಳುತ್ತಿದ್ದೇವೆ. ಅದರ ಸಂಕೇತವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ನಿತ್ಯಾನಂದ ಆಶ್ರಮದ ಟ್ರಸ್ಟಿ ರೋಹಿತ್ ಮಾತನಾಡಿ, ಎಲ್ಲಾ ಧರ್ಮದವರು ಸೌಹಾರ್ದಯುತವಾಗಿ ಬಾಳುವಂತಾಗಬೇಕು. ಪರಸ್ಪರ ಸೌಹಾರ್ದ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.  

 ಸ್ಥಳೀಯ ಕಾರ್ಪೊರೇಟರ್ ಲತೀಫ್ ಮಾತನಾಡಿ, ನಿತ್ಯಾನಂದ ಆಶ್ರಮ ಹಾಗೂ ಯುವಶಕ್ತಿ ಫ್ರೆಂಡ್ಸ್ ಮತ್ತು ತುಳುನಾಡ ಸಂಜೀವಿನಿ ಸಂಘಟನೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ಸೌಹಾರ್ದ ವಾತವರಣಕ್ಕೆ ಪೂರಕ ಎಂದರು.

ಈ ಸಂದರ್ಭ ನಿತ್ಯಾನಂದ ಆಶ್ರಮದ ಸದಸ್ಯ ಸದಾಶಿವ ಶೆಟ್ಟಿ, ಬಿಜೆಪಿ ಪೋರ್ಟ್ ವಾರ್ಡ್ ಅಧ್ಯಕ್ಷ ಯೋಗೀಶ್, ತುಳುನಾಡ ಸಂಜೀವಿನಿಯ ಸ್ಥಾಪಕ ರಾಹುಲ್, ದೇವಿಪ್ರಸಾದ್, ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ದೀಪಕ್ ಶೆಟ್ಟಿ, ವಿಕಾಸ, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News