ಚೀನಾ: 5 ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಿದ ರಾಕೆಟ್

Update: 2018-11-20 15:57 GMT

ಬೀಜಿಂಗ್, ನ. 20: ಚೀನಾ ಮಂಗಳವಾರ ಒಂದೇ ರಾಕೆಟ್‌ನಲ್ಲಿ ಒಂದು ಬಾಹ್ಯಾಕಾಶ ಪರಿಸರ ಸಂಶೋಧನಾ ಉಪಗ್ರಹ ಮತ್ತು ನಾಲ್ಕು ಕಿರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದೆ.

ಲಾಂಗ್ ಮಾರ್ಚ್-2ಡಿ ರಾಕೆಟ್ ಈ ಉಪಗ್ರಹಗಳನ್ನು ಹೊತ್ತು ಬೆಳಗ್ಗೆ 7:40ಕ್ಕೆ ಜಿಯಕಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಹಾರಿತು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉಪಗ್ರಹಗಳು ತಮ್ಮ ಪೂರ್ವನಿಗದಿತ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News