ನಕಲಿ ಅಂಕಪಟ್ಟಿ ವಿವಾದ: ಎಬಿವಿಪಿಯ ಅಂಕಿವ್ ಬೈಸೋಯಾ ವಿರುದ್ಧ ಎಫ್ ಐಆರ್ ದಾಖಲು

Update: 2018-11-20 16:57 GMT

ಹೊಸದಿಲ್ಲಿ, ನ.20: ದಿಲ್ಲಿ ವಿವಿಯಲ್ಲಿ ದಾಖಲಾತಿ ಪಡೆಯಲು ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪದಲ್ಲಿ ಎಬಿವಿಪಿಯ ಅಂಕಿವ್ ಬೈಸೋಯಾ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಬೈಸೋಯಾ ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿದ್ದಾರೆ ಎಂದು ಬೌದ್ಧ ಅಧ್ಯಯನ ವಿಭಾಗದ ಮುಖ್ಯಸ್ಥ ಕೆ.ಟಿ.ಎಸ್. ಸರಾವ್ ಪೊಲೀಸರಿಗೆ ದೂರು ನೀಡಿದ ನಂತರ ಈ ಬೆಳವಣಿಗೆ ನಡೆದಿದೆ. ದಿಲ್ಲಿ ವಿವಿಯ ಮಾಜಿ ಅಧ್ಯಕ್ಷ ಬೈಸೋಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದರು.

ದಿಲ್ಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬೈಸೊಯಾ ನವೆಂಬರ್ 15ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬೈಸೋಯಾ ಸಲ್ಲಿಸಿದ್ದ ಅಂಕಪಟ್ಟಿ ನಕಲಿ ಎಂದು ತಿರುವಳ್ಳುವರ್ ವಿವಿ ದಿಲ್ಲಿ ವಿವಿಗೆ ಪತ್ರ ಬರೆದ ನಂತರ ಈ ಬೆಳವಣಿಗೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News