ಗಂಗಾ ನದಿ ಕುರಿತು ಜಿ.ಡಿ ಅಗರ್ವಾಲ್ ರ ಪತ್ರ ಲಭಿಸಿದರೂ ಕ್ರಮ ಕೈಗೊಳ್ಳದ ಪ್ರಧಾನಿ ಕಚೇರಿ

Update: 2018-11-20 17:35 GMT

ಹೊಸದಿಲ್ಲಿ,ನ.20: ಗಂಗಾ ನದಿ ರಕ್ಷಣೆಗೆ ನಿರ್ದಿಷ್ಟ ಕ್ರಮಗಳಿಗೆ ಆಗ್ರಹಿಸಿ ಜಿ.ಡಿ ಅಗರ್ವಾಲ್ ಬರೆದ ಪತ್ರವು ದೊರೆತರೂ ಪ್ರಧಾನಿ ಕಚೇರಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿತ್ತು ಎಂಬ ವಿಷಯವು ಮಾಹಿತಿ ಹಕ್ಕಿನಡಿ ಲಭಿಸಿದ ಮಾಹಿತಿಯಿಂದ ಬಹಿರಂಗವಾಗಿದೆ.

ಪರಿಸರವಾದಿ ಮತ್ತು ಗಂಗಾ ನದಿ ಹೋರಾಟಗಾರ ಉಪನ್ಯಾಸಕ ಜಿ.ಡಿ.ಅಗರ್ವಾಲ್ ಅವರು ಮೃತಪಟ್ಟು ಒಂದು ತಿಂಗಳು ಕಳೆದ ನಂತರ ಮಾಹಿತಿ ಹಕ್ಕಿನಡಿ ಲಭಿಸಿದ ವರದಿಯಲ್ಲಿ ಈ ವಿಷಯ ಬಯಲಾಗಿದೆ. ಗಂಗಾ ನದಿಯ ಸ್ವಚ್ಛತೆ ಮತ್ತು ಮುಕ್ತ ಹರಿವಿಗೆ ಕ್ರಮಗಳನ್ನು ಸೂಚಿಸಿ ಅಗರ್ವಾಲ್ ಪ್ರಧಾನಿ ಮೋದಿಗೆ ಫೆಬ್ರವರಿ 24, ಜೂನ್ 13 ಮತ್ತು ಜೂನ್ 23ರಂದು ಪತ್ರ ಬರೆದಿದ್ದರು. ಆದರೆ ಇದಕ್ಕೆ ಪ್ರಧಾನ ಮಂತ್ರಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ ಎಂದು ಅಗರ್ವಾಲ್ ಆಮರಣಾಂತ ಉಪವಾಸ ಕುಳಿತಿದ್ದ ಹರಿದ್ವಾರದ ಮಾತೃ ಸದನದ ಮುಖ್ಯಸ್ಥರು ತಿಳಿಸಿದ್ದಾರೆ.

ಆರ್‌ಟಿಐಯಡಿ ಕೋರಲಾದ ಮಾಹಿತಿಗೆ ಉತ್ತರಿಸಿರುವ ಪ್ರಧಾನಿ ಕಚೇರಿ, ಜೂನ್ 13 ಮತ್ತು 23ರಂದು ಅಗರ್ವಾಲ್ ಬರೆದಿರುವ ಪತ್ರಗಳನ್ನು ಮುಂದಿನ ಕ್ರಮಕ್ಕಾಗಿ ಜಲಸಂಪನ್ಮೂಲ, ಗಂಗಾ ಪುನರುತ್ಥಾನ ಸಚಿವಾಲಯದ ಕಾರ್ಯದರ್ಶಿಗೆ ಕಳುಹಿಸಲಾಗಿದೆ ಎಂದು ತಿಳಿಸಿತ್ತು ಎಂದು ಆರ್‌ಟಿಐ ಕಾರ್ಯಕರ್ತ ಉಜ್ವಲ್ ಕೃಷ್ಣಮ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News