ಚತ್ತೀಸ್‌ಗಡ ಚುನಾವಣೆ: ಎರಡನೇ ಹಂತದಲ್ಲಿ ಶೇ.72ರಷ್ಟು ಮತದಾನ

Update: 2018-11-20 17:38 GMT

ರಾಯ್ಪುರ,ನ.20: ಚತ್ತೀಸ್‌ಗಡ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ಕೊನೆಗೊಂಡಿದ್ದು, ಶೇ.72ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಹತ್ತೊಂಬತ್ತು ಜಿಲ್ಲೆಗಳಲ್ಲಿರುವ 72 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಒಟ್ಟಾರೆ ಶೇ.57 ಮತದಾನ ನಡೆದಿದೆ. ಮಂಗಳವಾರ ನಡೆದ ಮತದಾನದ ಸಂದರ್ಭ ಮೊದಲ ಬಾರಿ ಮತ ಚಲಾಯಿಸುತ್ತಿರುವ ಯುವಕರಿಂದ ಹಿಡಿದು ಶತಕ ಪೂರೈಸಿದ ವೃದ್ಧರೂ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಕೊರಿಯ ಜಿಲ್ಲೆಯ ಬೈಕುಂತ್‌ಪುರದ 106ರ ವೃದ್ದೆ ಸಮುದ್ರಿ ಪಟೇಲ್ ಅತ್ಯಂತ ಹಿರಿಯ ಮತದಾರೆಯಾಗಿದ್ದರೆ ರಾಯ್ಪುರ ಜಿಲ್ಲೆಯ 102ರ ಹರೆಯದ ರಾಜ್ ಕುಂವರ್ ಎರಡನೇ ಹಿರಿಯ ಮತದಾರರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಬಲರಾಮಪುರ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಹಣ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ ಘಟನೆಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News