ತರಬೇತು ವಿಮಾನ ಪತನ: ಪೈಲೆಟ್‌ಗೆ ಗಾಯ

Update: 2018-11-21 17:12 GMT

ಹೈದರಾಬಾದ್, ನ. 21: ಇಲ್ಲಿಗೆ ಸಮೀಪದ ಮೋಕಿಲಾ ಪ್ರದೇಶದಲ್ಲಿರುವ ಹೊಲದಲ್ಲಿ ತರಬೇತು ವಿಮಾನ ಬುಧವಾರ ಪತನಗೊಂಡಿದ್ದು, ಟ್ರೈನಿ ಪೈಲೆಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಮಾನ ನಗರ ಮೂಲದ ರಾಜೀವ್ ಗಾಂಧಿ ಏವಿಯೇಶನ್ ಅಕಾಡೆಮಿಗೆ ಸೇರಿದೆ. ದುರಂತ ಪೂರ್ವಾಹ್ನ 11.30ಕ್ಕೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತನಗೊಂಡಿತು. ಟ್ರೈನಿ ಪೈಲೆಟ್ ಸುರಕ್ಷಿತವಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ ಎಂದು ಉಪ ಪೊಲೀಸ್ ಅಧೀಕ್ಷಕ ಎನ್. ಪ್ರಕಾಶ್ ರೆಡ್ಡಿ ಹೇಳಿದ್ದಾರೆ.

ಪೈಲೆಟ್ ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News