ವಿಶ್ವಸಂಸ್ಥೆಯ ಪರಿಸರ ಘಟಕದ ಮುಖ್ಯಸ್ಥ ರಾಜೀನಾಮೆ

Update: 2018-11-21 17:13 GMT

ವಿಶ್ವಸಂಸ್ಥೆ, ನ. 21: ವಿಶ್ವಸಂಸ್ಥೆಯ ಪರಿಸರ ವಿಭಾಗದ ಮುಖ್ಯಸ್ಥ ಎರಿಕ್ ಸಾಲ್‌ಹೀಮ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಲೆಕ್ಕಪರಿಶೋಧನೆಯಲ್ಲಿ ಅವರ ಭಾರೀ ಮೊತ್ತದ ಪ್ರಯಾಣ ಖರ್ಚು ಬೆಳಕಿಗೆ ಬಂದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ನಾರ್ವೆಯ ಮಾಜಿ ಪರಿಸರ ಸಚಿವ ಎರಿಕ್ ನೈರೋಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಶ್ವಸಂಸ್ಥೆಯ ಪರಿಸರ ಘಟಕದಲ್ಲಿ 2016ರಿಂದ ಕಾರ್ಯನಿರ್ವಹಿಸುತ್ತಿದ್ದರು.

ಎರಿಕ್ ಪ್ರಯಾಣಕ್ಕಾಗಿ ಸುಮಾರು 500 ಮಿಲಿಯ ಡಾಲರ್ (ಸುಮಾರು 3,561 ಕೋಟಿ ರೂಪಾಯಿ) ಹಣ ಖರ್ಚು ಮಾಡಿರುವುದು ವಿಶ್ವಸಂಸ್ಥೆಯ ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ. ಅದೂ ಅಲ್ಲದೆ, ವಿಶ್ವಸಂಸ್ಥೆಯು ಅನುದಾನ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಅವರು ಅನಗತ್ಯ ಖರ್ಚುಗಳನ್ನು ಮಾಡಿರುವುದೂ ಟೀಕೆಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News