ದಿಲ್ಲಿಯ ಒಟ್ಟು ವಾಯು ಗುಣಮಟ್ಟ ‘ತುಂಬಾ ಕಳಪೆ’

Update: 2018-11-21 17:52 GMT

ಹೊಸದಿಲ್ಲಿ, ನ. 21: ದಿಲ್ಲಿಯ ಒಟ್ಟು ವಾಯು ಗುಣಮಟ್ಟ ಬುಧವಾರ ‘ತುಂಬಾ ಕಳಪೆ’ ಶ್ರೇಣಿಗೆ ತಲುಪಿದೆ. ಅಲ್ಲದೆ ಕಡಿಮೆ ಗಾಳಿ ವೇಗದಿಂದಾಗಿ ಮಾಲಿನ್ಯ ಮಟ್ಟ ಕೆಲವು ಪ್ರದೇಶಗಳಲ್ಲಿ ‘ಗಂಭೀರ’ ಮಟ್ಟ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ನಡೆಸುತ್ತಿರುವ ವಾಯು ಗುಣಮಟ್ಟ ವ್ಯವಸ್ಥೆ ಹಾಗೂ ಹವಾಮಾನ ಮುನ್ನೆಚ್ಚರಿಕೆ (ಎಸ್‌ಎಎಫ್‌ಎಆರ್) ಪ್ರಕಾರ ನಗರದಲ್ಲಿ ಒಟ್ಟು ವಾಯು ಗುಣಮಟ್ಟ ಸೂಚ್ಯಂಕ 287 ದಾಖಲಾದ್ದು, ‘ತುಂಬಾ ಕಳಪೆ’ ಶ್ರೇಣಿಗೆ ಇಳಿದಿದೆ.

 ದಿಲ್ಲಿಯ 13 ಪ್ರದೇಶಗಳಲ್ಲಿ ‘ಗಂಭೀರ’ ಹಾಗೂ 23 ಪ್ರದೇಶಗಳಲ್ಲಿ ‘ತುಂಬಾ ಕಳಪೆ’ ವಾಯು ಗುಣಮಟ್ಟ ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶ ತಿಳಿಸಿದೆ. ಬುಧವಾರ ಪಿಎಂ 2.5 (ಗಾಳಿಯಲ್ಲಿರುವ ಕಣಗಳು) ಮಟ್ಟ 242 ದಾಖಲಾಗಿದೆ. ಪಿಎಂ 10 ಮಟ್ಟದಲ್ಲಿ 402 ದಾಖಲಾಗಿದೆ ಎಂದು ಅದು ತಿಳಿಸಿದೆ.

ಮುಂದಿನ ಮೂರು ದಿನಗಳಲ್ಲಿ ದಿಲ್ಲಿಯಲ್ಲಿ ವಾಯು ಗುಣಮಟ್ಟ ‘ತುಂಬಾ ಕಳಪೆ’ಯಾಗಲಿದೆ ಎಂದು ಎಸ್‌ಎಎಫ್‌ಎಆರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News