ನಿಸಾನ್ ಅಧ್ಯಕ್ಷತೆಯಿಂದ ಕಾರ್ಲೋಸ್ ವಜಾ

Update: 2018-11-22 16:35 GMT

ಟೋಕಿಯೊ, ನ. 22: ಹಣಕಾಸು ಅವ್ಯವಹಾರ ನಡೆಸಿರುವ ಆರೋಪ ಎದುರಿಸುತ್ತಿರುವ ಜಪಾನ್‌ನ ನಿಸಾನ್ ಮೋಟರ್ ಕಂಪೆನಿಯ ಅಧ್ಯಕ್ಷ ಕಾರ್ಲೋಸ್ ಗೋನ್‌ರನ್ನು ನಿರ್ದೇಶಕರ ಮಂಡಳಿ ಗುರುವಾರ ವಜಾಗೊಳಿಸಿದೆ ಎಂದು ಜಪಾನ್‌ನ ಎನ್‌ಎಚ್‌ಕೆ ಸುದ್ದಿ ವಾಹಿನಿ ವರದಿ ಮಾಡಿದೆ.

ಕಾರ್ಲೋಸ್ ಗೋನ್ ಬಂಧನದಿಂದ ಆಗಿರುವ ಹಾನಿಯನ್ನು ತಡೆಯಲು ನಿರ್ದೇಶಕರು ಈ ಕ್ರಮ ತೆಗೆದುಕೊಂಡಿದ್ದಾರೆ.

ಹಣಕಾಸು ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಸುದೀರ್ಘ ಅವಧಿಯಲ್ಲಿ ಕಂಪೆನಿಯ ಅಧ್ಯಕ್ಷರಾಗಿದ್ದ ಗೋನ್ ವಿರುದ್ಧ ಜಪಾನ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News