×
Ad

ಶಬರಿಮಲೆಗೆ ಮಹಿಳೆಯರ ಪ್ರವೇಶ ಬೆಂಬಲಿಸಿದ ಶಿಕ್ಷಕಿಯ ಮನೆಗೆ ಕಲ್ಲೆಸೆತ

Update: 2018-11-22 22:34 IST
ಫೊಟೊ ಕೃಪೆ: malayalam.indianexpress

ಕೊಚ್ಚಿ, ನ.22: ಎಲ್ಲಾ ವಯಸ್ಸಿನ ಮಹಿಳೆಯರು ಶಬರಿಮಲೆ ಪ್ರವೇಶಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿದ ಶಾಲಾ ಶಿಕ್ಷಕಿಯೊಬ್ಬರ ಮನೆಗೆ ದುಷ್ಕರ್ಮಿಗಳು ಕಲ್ಲೆಸೆದಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕಕ್ಕಂಚೇರಿಯಲ್ಲಿ ನಡೆದಿದೆ.

ಈ ಬಗ್ಗೆ ಶಿಕ್ಷಕಿ ಅಪರ್ಣ ಶಿವಗಾಮಿ ಪೊಲೀಸರಿಗೆ ದೂರು ನೀಡಿದ್ದಾರೆ. ದಾಳಿ ನಡೆಸಿದವರು ಯಾರೆಂದು ತನಗೆ ತಿಳಿದಿಲ್ಲ. ಆದರೆ ದಾಳಿಯ ನಂತರ ಬೈಕ್ ಸದ್ದು ಕೇಳಿಸಿತ್ತು ಎಂದವರು ಹೇಳಿದ್ದಾರೆ. ಸ್ಥಳೀಯ ಪೊಲೀಸರು ಶಿವಗಾಮಿಯವರ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಶಿವಗಾಮಿ ಫೇಸ್ಬುಕ್ ಪೋಸ್ಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News