ಹಾಶಿಂಪುರ ಸಾಮೂಹಿಕ ಹತ್ಯಾಕಾಂಡ ಪ್ರಕರಣ: ನಾಲ್ವರು ಪಿಎಸಿ ಅಧಿಕಾರಿಗಳು ದಿಲ್ಲಿ ಕೋರ್ಟ್‌ಗೆ ಶರಣು

Update: 2018-11-22 17:08 GMT

ಹೊಸದಿಲ್ಲಿ, ನ.22: ಹಾಶಿಂಪುರ ಸಾಮೂಹಿಕ ಹತ್ಯಾಕಾಂಡ ಪ್ರಕರಣದಲ್ಲಿ ಅಪರಾಧಿಗಳೆಂದು ನಿರ್ಣಯಿಸಲ್ಪಟ್ಟ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ(ಪಿಎಸಿ)ಯ 16 ಅಧಿಕಾರಿಗಳಲ್ಲಿ ನಾಲ್ವರು ಗುರುವಾರ ದಿಲ್ಲಿಯ ತೀಸ್ ಹಝಾರಿ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.

ನವೆಂಬರ್ 22ರ ಒಳಗೆ ಶರಣಾಗದಿದ್ದರೆ ಅವರನ್ನು ಬಂಧಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನಾಲ್ವರು ಅಧಿಕಾರಿಗಳನ್ನು ತಿಹಾರ್ ಜೈಲಿಗೆ ಕಳುಹಿಸಲಾಗುವುದು. ಅಪರಾಧಿಗಳೆಂದು ನಿರ್ಣಯಿಸಲ್ಪಟ್ಟಿರುವ ಉಳಿದ ಸಿಬ್ಬಂದಿಗಳ ವಿರುದ್ಧ ನ್ಯಾಯಾಲಯ ಜಾಮೀನುರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ. 1897ರಲ್ಲಿ ಉತ್ತರಪ್ರದೇಶದ ಹಾಶಿಂಪುರ ಗ್ರಾಮದಲ್ಲಿ 38 ಮುಸ್ಲಿಮರನ್ನು ಮನೆಯಿಂದ ಕರೆದೊಯ್ದ ಪಿಎಸಿ ಸಿಬ್ಬಂದಿ ಅವರನ್ನು ಗುಂಡಿಕ್ಕಿ ಸಾಯಿಸಿ ಮೃತದೇಹಗಳನ್ನು ಕಾಲುವೆಗೆ ಎಸೆದಿದ್ದರು. ಪ್ರಕರಣದಲ್ಲಿ 19 ಮಂದಿ ಆರೋಪಿಗಳಿದ್ದು ಮೂವರು ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದರು. ಆರೋಪಿಗಳ ವಿರುದ್ಧ ಕ್ರಿಮಿನಲ್ ಒಳಸಂಚು, ಅಪಹರಣ, ಕೊಲೆ ಮತ್ತು ಅಪರಾಧದ ಪುರಾವೆ ನಾಶದ ಆರೋಪ ಹೊರಿಸಲಾಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಇದೊಂದು ಕ್ರೂರ ಹಾಗೂ ಭಯಾನಕ ಪ್ರಕರಣವಾಗಿದೆ ಎಂದು ತಿಳಿಸಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News