ಸುಟ್ಟು ಕರಕಲಾದ ಜನರು: ಗೋಧ್ರಾ ದುರಂತದ ಫೋಟೊಗಳು ಎಂದು ವೈರಲ್ ಆಗಿರುವ ಪೋಸ್ಟ್ ಹಿಂದಿನ ಸತ್ಯಾಂಶವೇನು?

Update: 2018-11-22 17:32 GMT

“ಕಾಂಗ್ರೆಸ್ ಗೆ ಮತ ಹಾಕುವ ಮುನ್ನ, ಹಿಂದೂ ಸಹೋದರರೇ ಕಾಂಗ್ರೆಸ್ ಸರಕಾರದಲ್ಲಿದ್ದ ಕಾಂಗ್ರೆಸ್ ಮುಸ್ಲಿಮರು ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಿದ ಗೋಧ್ರಾ ಹತ್ಯಾಕಾಂಡವನ್ನು ನೆನಪಿಸಿಕೊಳ್ಳಿ. ನೀವು ಸ್ವಲ್ಪವಾದರೂ ಹಿಂದೂಗಳನ್ನು ಪ್ರೀತಿಸುತ್ತೀರಾದರೆ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಿ” ಈ ರೀತಿಯ ಬರಹವಿರುವ ಸುಟ್ಟು ಕರಕಲಾದ ಶವಗಳ ಫೋಟೊವಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ಗೋಧ್ರಾ ದುರಂತದ ಫೋಟೊ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದ್ದು, ಐ ಸಪೋರ್ಟ್ ಯೋಗಿ ಎನ್ನುವ ಪೇಜ್ ನಲ್ಲಿ 1000 ಬಾರಿ ಶೇರ್ ಆಗಿದೆ.

ಇಂತಹದ್ದೇ ಇನ್ನೂ ಕೆಲವು ಫೋಟೊಗಳು ಗೋಧ್ರಾ ದುರಂತದ್ದು ಎನ್ನುವ ಉಲ್ಲೇಖದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಾಸ್ತವವೇನು?

ಆದರೆ 2010ರಲ್ಲಿ ಕಾಂಗೋದಲ್ಲಿ ನಡೆದ ತೈಲ ಟ್ಯಾಂಕರ್ ಸ್ಫೋಟಗೊಂಡ ಘಟನೆ ಫೋಟೊಗಳಿವು ಎನ್ನುವುದನ್ನು ‘ಆಲ್ಟ್ ನ್ಯೂಸ್’ ಪತ್ತೆ ಹಚ್ಚಿದೆ. 2017ರಲ್ಲೂ ಈ ಬಗ್ಗೆ 'ಇಂಡಿಯಾ ಟುಡೆ' ಬೆಳಕು ಚೆಲ್ಲಿತ್ತು. 2017ರಲ್ಲಿ ಈ ಫೋಟೊಗಳು ರೊಹಿಂಗ್ಯನ್ನರ ಹತ್ಯಾಕಾಂಡ ಎಂದು ವೈರಲ್ ಆಗಿತ್ತು.

2010ರ ಜೂನ್ ನಲ್ಲಿ ಕಾಂಗೋದ ಗ್ರಾಮವೊಂದರಲ್ಲಿ ತೈಲ ಟ್ಯಾಂಕರ್ ಅಪಘಾತಕ್ಕೀಡಾಗಿ ಸಂಭವಿಸಿದ ಅಪಘಾತದಲ್ಲಿ 230 ಮಂದಿ ಮೃತಪಟ್ಟಿದ್ದರು. ಇದೀಗ 2010ರ ಈ ದುರಂತವನ್ನು ಗೋಧ್ರಾ ದುರಂತದ ಫೋಟೊಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುತ್ತಿದೆ. ‘ಐರನ್ ಮ್ಯಾನ್ ಮೋದಿ’, ‘ಐ ಸಪೋರ್ಟ್ ಮೋದಿ’ ಮುಂತಾದ ಪೇಜ್ ಗಳು ಈ ಸುಳ್ಳನ್ನು ವ್ಯವಸ್ಥಿತವಾಗಿ ಹರಡುತ್ತಿದೆ.

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News