ಫರಂಗಿಪೇಟೆ: ಎಂಪವರ್ ಇಂಡಿಯಾ ಫೌಂಡೇಶನ್ ಮಾಹಿತಿ ಕೇಂದ್ರ ಉದ್ಘಾಟನೆ

Update: 2018-11-23 17:07 GMT

ಫರಂಗಿಪೇಟೆ, ನ. 23: ಇಮ್ದಾದ್ ಇಂಡಿಯಾ ಇದರ ಅಧೀನದಲ್ಲಿರುವ ಎಂಪವರ್ ಇಂಡಿಯಾ ಫೌಂಡೇಶನ್ ಫರಂಗಿಪೇಟೆ ಇದರ ಕರ್ನಾಟಕ ರಾಜ್ಯದ ಪ್ರಪ್ರಥಮ ಮಾಹಿತಿ ಕೇಂದ್ರ ಶುಕ್ರವಾರ ಫರಂಗಿಪೇಟೆಯಲ್ಲಿ ಉದ್ಘಾಟನೆಗೊಂಡಿತು.

ಎಂಪವರ್ ಇಂಡಿಯಾ ಫೌಂಡೇಶನ್ ರಾಜ್ಯ ಸಂಚಾಲಕವಅಯ್ಯೂಬ್ ಅಗ್ನಾಡಿ ಮಾತನಾಡಿ, ಮೂಲೆಂಗುಂಪಾದ ಸಮಾಜವನ್ನು ಬಲಿಷ್ಟಗೊಳಿಸುವ ಉದ್ದೇಶ ದಿಂದ ಅವರು ಶೈಕ್ಷಣಿಕ, ಆರೋಗ್ಯ, ಉದ್ಯೋಗ ರಂಗದಲ್ಲಿ ಸಮಾಜದ ವಿವಿಧ ಉನ್ನತ ಸ್ಥರಗಳಲ್ಲಿ ತಲುಪಬೇಕೆಂಬ ಗುರಿ ಇಟ್ಟು ಎಂಪವರ್ ಇಂಡಿಯಾ ಫೌಂಡೇಶನ್ ಕಾರ್ಯಾಚರಿಸುತ್ತದೆ. ಅಲ್ಪ ಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಈಗಾಗಲೇ ಹಲವು ಆಯೋಗಗಳು ವರದಿ ನೀಡಿದ್ದು ಅವರನ್ನು ಮುಖ್ಯವಾಹಿಣಿಗೆ ತರುವ ಅನುಷ್ಟಾನ ಮಾತ್ರ ಆಡಳಿತ ವ್ಯವಸ್ಥೆಗೆ ಮಾಡಲು ಸಾದ್ಯವಾಗಿಲ್ಲ, ಸರಕಾರದ ಹೊಸ ಹೊಸ ಸೌಲಭ್ಯಗಳು, ಬದಲಾಗುವ ಯೋಜನೆಗಳ ಮಾಹಿತಿ ಕೊರತೆಯಿಂದ ಸಾರ್ವಜನಿಕರು ವಂಚಿತವಾಗುತ್ತಿದ್ದು, ಇದನ್ನು ಸರಿದೂಗಿಸುವ ಪ್ರಯತ್ನ ಈ ಎಂಪವರ್ ಇಂಡಿಯಾ ಫೌಂಡೇಶನ್ ಮಾಹಿತಿ ಮತ್ತು ಸೇವಾ ಕಾರ್ಯದಿಂದ ಮಾಡುತ್ತಿದೆ ಎಂದರು. ಅಧ್ಯಕ್ಷತೆಯನ್ನು ಮಾಹಿತಿ ಕೇಂದ್ರ ಫರಂಗಿಪೇಟೆ ಅಧ್ಯಕ್ಷ ಬಶೀರ್ ಫರಂಗಿಪೇಟೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಫರಂಗಿಪೇಟೆ ಮಸೀದಿ ಅಧ್ಯಕ್ಷ ಮೊಹಮ್ಮದ್ ಬಾವ, ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ನಿರ್ದೇಶಕ ಮೊಹಮ್ಮದ್ ವಳವೂರು, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ, ಪಿ.ಎಪ್.ಐ ಬಂಟ್ವಾಳ ಅಧ್ಯಕ್ಷ ಇಜಾಝ್ ಅಹಮದ್, ಸುಲ್ತಾನ್ ಬಿಲ್ಡರ್ಸ್ ಮಾಲಕ ಮೆಹಮ್ಮದ್ ಯುಬಿ ಈ ಸಂದರ್ಭ ಮಾತನಾಡಿದರು.

ಅಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಪ್ರ. ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಪಿ.ಎಫ್.ಐ ಫರಂಗಿಪೇಟೆ ಅಧ್ಯಕ್ಷ ನಿಸಾರ್ ವಳವೂರು, ಮಾಹಿತಿ ಕೇಂದ್ರ ಮಂಗಳೂರು ವ್ಯವಸ್ಥಾಪಕ ಅಹ್ರಾಸ್, ಎಸ್.ಡಿ.ಪಿ.ಐ ಮುಖಂಡ ಸುಲೈಮಾನ್ ಉಸ್ತಾದ್, ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮಾರ್ ಉಪಸ್ಥಿತರಿದ್ದರು. ಪುದು ಗ್ರಾಪಂ ಸದಸ್ಯ ನಝೀರ್ ಹತ್ತನೇಮೈಲ್ ಕಲ್ಲು ಸ್ವಾಗತಿಸಿ, ಕಾದರ್ ಅಮೆಮಾರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News