×
Ad

ಮಾಹಿತಿ ಸೋರಿಕೆ: 7 ದೇಶಗಳ ಸಮಿತಿಯಿಂದ ಫೇಸ್‌ಬುಕ್ ವಿಚಾರಣೆ

Update: 2018-11-24 22:33 IST

ಸಾನ್‌ಫ್ರಾನ್ಸಿಸ್ಕೊ, ನ. 24: ಮಾಹಿತಿ ಸೋರಿಕೆಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಏಳು ದೇಶಗಳ 22 ಸದಸ್ಯರನ್ನೊಳಗೊಂಡ ಅಂತಾರಾಷ್ಟ್ರೀಯ ಸಮಿತಿಯೊಂದರ ವಿಚಾರಣೆಯನ್ನು ಎದುರಿಸಲಿದೆ.

ಬ್ರಿಟನ್, ಅರ್ಜೆಂಟೀನ, ಬ್ರೆಝಿಲ್, ಕೆನಡ, ಐರ್‌ಲ್ಯಾಂಡ್, ಲಾತ್ವಿಯ ಮತ್ತು ಸಿಂಗಾಪುರ ಸಂಸತ್ತುಗಳ ಚುನಾಯಿತ ಸದಸ್ಯರನ್ನು ಫೇಸ್‌ಬುಕ್‌ನ ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕ ನೀತಿಯ ಉಪಾಧ್ಯಕ್ಷ ರಿಚರ್ಡ್ ಅಲನ್ ಮುಂದಿನ ವಾರ ಲಂಡನ್‌ನಲ್ಲಿ ಎದುರಿಸಲಿದ್ದಾರೆ.

‘‘ಏಳು ಸಂಸತ್ತುಗಳ 22 ಪ್ರತಿನಿಧಿಗಳನ್ನು ಒಳಗೊಂಡ ಅಭೂತಪೂರ್ವ ಅಂತಾರಾಷ್ಟ್ರೀಯ ಮಹಾ ಸಮಿತಿಯೊಂದು ಲಂಡನ್‌ನಲ್ಲಿ ಮುಂದಿನ ವಾರ ಸಮಾವೇಶಗೊಳ್ಳಲಿದೆ. ಆನ್‌ಲೈನ್ ಸುಳ್ಳು ಸುದ್ದಿ ಬಿಕ್ಕಟ್ಟು ಮತ್ತು ಫೇಸ್‌ಬುಕ್‌ನ ಸರಣಿ ಮಾಹಿತಿ ಸೋರಿಕೆ ಹಗರಣಗಳ ಬಗ್ಗೆ ಸಮಿತಿಯು ಫೇಸ್‌ಬುಕ್‌ಗೆ ಪ್ರಶ್ನೆಗಳನ್ನು ಕೇಳಲಿದೆ’’ ಎಂದು ‘ಟೆಕ್‌ಕ್ರಂಚ್’ ಶುಕ್ರವಾರ ವರದಿ ಮಾಡಿದೆ.

ವೀಡಿಯೊ ಲಿಂಕ್ ಮೂಲಕ ಪ್ರಶ್ನೆಗಳಿಗೆ ಉತ್ತರ ನೀಡಬಹುದಾದ ಅವಕಾಶವನ್ನು ಸಮಿತಿಯು ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್‌ಗೆ ನೀಡಿದೆ, ಆದರೆ ಅದನ್ನು ತಿರಸ್ಕರಿಸಲಾಗಿದೆ ಎಂದು ಅದು ತಿಳಿಸಿದೆ.

ಮಾಹಿತಿ ಸೋರಿಕೆಗೆ ಸಂಬಂಧಿಸಿ ಫೇಸ್‌ಬುಕ್ ಈ ಹಿಂದೆಯೂ ಹಲವು ವಿಚಾರಣೆಗಳನ್ನು ಎದುರಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News