ಪಾಕ್: ಧಾರ್ಮಿಕ ಪಕ್ಷದ ನಾಯಕನ 300 ಬೆಂಬಲಿಗರ ಬಂಧನ

Update: 2018-11-24 17:05 GMT

ಮುಲ್ತಾನ್ (ಪಾಕಿಸ್ತಾನ), ನ. 24: ದೇವನಿಂದನೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ಪಾಕಿಸ್ತಾನದ ಕ್ರೈಸ್ತ ಮಹಿಳೆ ಆಸಿಯಾ ಬೀಬಿಯನ್ನು ದೋಷಮುಕ್ತಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪು ವಿರೋಧಿಸಿ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳನ್ನು ಆಯೋಜಿಸಿದ್ದ ಧಾರ್ಮಿಕ ನಾಯಕರೊಬ್ಬರ ಸುಮಾರು 300 ಬೆಂಬಲಿಗರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ತೆಹ್ರೀಕೆ ಲಬ್ಬಾಯಿಕ್ ಪಕ್ಷದ ನಾಯಕ ಖಾದಿಮ್ ಹುಸೈನ್ ರಿಝ್ವಿಯನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದರು.

ಈ ಬಂಧನದ ಬೆನ್ನಿಗೇ, ಪೊಲೀಸರು ಪಂಜಾಬ್ ರಾಜ್ಯದಾದ್ಯಂತ ದಾಳಿಗಳನ್ನು ನಡೆಸಿ ಅವರ ಬೆಂಬಲಿಗರನ್ನು ಬಂಧಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತಮ್ಮ ನಾಯಕನ ಬಂಧನವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟಿಸಿದ ಅವರ ಬೆಂಬಲಿಗರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡರು. ಸುಪ್ರೀಂ ಕೋರ್ಟ್‌ನ ಅಕ್ಟೋಬರ್ 31ರ ಆದೇಶವನ್ನು ಪ್ರತಿಭಟಿಸಿ ರಿಝ್ವಿಯ ಬೆಂಬಲಿಗರು ಹಿಂಸಾತ್ಮಕ ಪ್ರತಿಭಟನೆ ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News