ಕಾರ್ಖಾನೆಯಲ್ಲಿ ಸ್ಫೋಟ: 2 ಸಾವು

Update: 2018-11-24 17:17 GMT

ಬೀಜಿಂಗ್, ನ. 24: ಉತ್ತರ ಚೀನಾದ ಜಿಲಿನ್ ಪ್ರಾಂತದ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ 24 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ಸಂಸ್ಥೆ ಶನಿವಾರ ತಿಳಿಸಿದೆ.

ಶುಕ್ರವಾರ ಮಧ್ಯರಾತ್ರಿಗೆ ಕೊಂಚ ಮುನ್ನ ಸಂಭವಿಸಿದ ಸ್ಫೋಟ ಹಾಗೂ ನಂತರ ಹೊತ್ತಿಕೊಂಡ ಬೆಂಕಿಯಿಂದಾಗಿ ಕನಿಷ್ಠ 41 ಮನೆಗಳು ಸುಟ್ಟುಹೋಗಿವೆ.

ಸ್ಫೋಟದ ಕಾರಣವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ, ಆದರೆ, ಇದು ಭಯೋತ್ಪಾದಕ ಘಟನೆ ಅಲ್ಲ ಎನ್ನುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜನರನ್ನು ಈ ಪ್ರದೇಶದಿಂದ ತೆರವುಗೊಳಿಸಲಾಗಿದೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News