×
Ad

ಶಬರಿಮಲೆ ವಿವಾದ: ಬಿಜೆಪಿ ವರಿಷ್ಠ, ಇತರ ನಾಲ್ವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ

Update: 2018-11-24 23:23 IST

ಹೊಸದಿಲ್ಲಿ, ನ. 24: ಸುಪ್ರೀಂ ಕೋರ್ಟ್‌ನ ಆದೇಶ ಅನುಷ್ಠಾನಗೊಳಿಸದ ಹಿನ್ನೆಲೆಯಲ್ಲಿ ಬಿಜೆಪಿಯ ಕೇರಳ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ, ಶಬರಿಮಲೆ ದೇವಾಲಯದ ಅರ್ಚಕ ಹಾಗೂ ಇತರ ಮೂವರ ವಿರುದ್ಧ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆ ಮನವಿ ದಾಖಲಿಸಲು ಅನುಮೋದನೆ ನೀಡಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಿರಾಕರಿಸಿದ್ದರು. ಆದುದರಿಂದ ಮನವಿಯನ್ನು ನೇರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಯಿತು.

ಬುಧವಾರ ಗುಂಪಿನೊಂದಿಗೆ ಶಬರಿಮಲೆ ದೇವಾಲಯದತ್ತ ತೆರಳುತ್ತಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅನಂತರ ತಿರುವಲ್ಲ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು.

ನವೆಂಬರ್ 17ರಂದು ನೀಲಕ್ಕಲ್ ತಳ ಶಿಬಿರದಲ್ಲಿ ಪೊಲೀಸರೊಂದಿಗ ಘರ್ಷಣೆ ನಡೆದ ಬಳಿಕ ಸುರೇಂದ್ರನ್ ಹಾಗೂ ಅವರೊಂದಿಗಿದ್ದ ಇತರರನ್ನು ಬಂಧಿಸಲಾಗಿತ್ತು. ನಿಷೇಧಾಜ್ಞೆ ಜಾರಿಗೊಳಿಸಿದ ಪ್ರದೇಶದಲ್ಲಿ ಸಾಗಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಅವರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಶಬರಿಮಲೆ ಅಯ್ಯಪ್ಪ ದೇಗುದಲ್ಲಿನ ಪರಿಸ್ಥಿತಿ ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ ಎಂದು ಪ್ರವಾಸೋದ್ಯಮದ ಸಹಾಯಕ ಸಚಿವ ಕೆ.ಜೆ. ಅಲ್ಫೋನ್ಸಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News