ದಿಲ್ಲಿ ಸಿಗ್ನೇಚರ್ ಸೇತುವೆಯಲ್ಲಿ ಅಪಘಾತ: ಓರ್ವ ಮೃತ್ಯು
Update: 2018-11-24 23:55 IST
ಹೊಸದಿಲ್ಲಿ, ನ. 24: ಸಿಗ್ನೇಚರ್ ಸೇತುವೆಯಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟ ಒಂದು ದಿನದ ಬಳಿಕ ಶನಿವಾರ ಮೋಟರ್ ಸೈಕಲ್ ಸ್ಕಿಡ್ ಆಗಿ 24 ವರ್ಷದ ಯುವಕ ಮೃತಪಟ್ಟಿದ್ದಾನೆ. ಆತನ ಸೋದರ ಸಂಬಂಧಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಯುವಕನನ್ನು ಶಂಕರ್ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರನನ್ನು ಆತನ ಸೋದರ ಸಂಬಂಧಿ ದೀಪಕ್ (17) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ನಂಗ್ಲೋಯಿಯಿಂದ ಈಶಾನ್ಯ ಜಿಲ್ಲೆಗೆ ತೆರಳುತ್ತಿದ್ದರು ತಿಮಾರ್ಪುರ್ ಪೊಲೀಸ್ ಠಾಣೆ ಈ ಘಟನೆ ಬಗ್ಗೆ ಮಾಹಿತಿ ನೀಡಿತ್ತು ಎಂದು ಅವರು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶಂಕರ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ದೀಪಕ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಶಂಕರ್ ಗಾಝಿಯಾಬಾದ್‌ನ ಹಾಗೂ ದೀಪಕ್ ಶಾಲಿಮಾರ್ ಬಾಗ್‌ನ ನಿವಾಸಿ.