ವಿದೇಶದಿಂದ ವಾಪಸ್ ತಂದ ಕಪ್ಪು ಹಣದ ಮಾಹಿತಿ ಹಂಚಲು ಪ್ರಧಾನಿ ಕಚೇರಿ ನಕಾರ

Update: 2018-11-25 15:31 GMT

ಹೊಸದಿಲ್ಲಿ, ಡಿ.6: ವಿದೇಶದಿಂದ ವಾಪಸ್ ತರಲಾದ ಕಪ್ಪುಹಣದ ಬಗ್ಗೆ 15 ದಿನಗಳೊಳಗೆ ಮಾಹಿತಿಯನ್ನು ಒದಗಿಸುವಂತೆ ಪ್ರಧಾನಿ ಕಾರ್ಯಾಲಯವನ್ನು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ವು ಕೇಳಿಕೊಂಡಿರುವ ಹೊರತಾಗಿಯೂ ಪ್ರಧಾನಿ ಕಾರ್ಯಾಲಯವು ಆರ್‌ಟಿಐ ಕಾಯ್ದೆಯಡಿ ಈ ಕುರಿತ ಮಾಹಿತಿಯ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದೆ.

ವಿದೇಶದಲ್ಲಿ ಭಾರತೀಯರ ಕೂಡಿಹಾಕಿರುವ ಸಂಪತ್ತಿನ ಕುರಿತ ಮಾಹಿತಿಯ ವಿವರಗಳನ್ನು ಬಹಿರಂಗಪಡಿಸುವುದರಿಂದ, ತಪ್ಪಿತಸ್ಥರನ್ನು ತನಿಖೆಗೊಳಪಡಿಸಲು ಹಾಗೂ ಅವ ನ್ಯಾಯಾಂಗ ವಿಚಾರಣೆಗೆ ಅಡ್ಡಿಯುಂಟಾಗುತ್ತದೆಯೆಂಬ ಕಾರಣ ನೀಡಿದೆ.

ಕೇಂದ್ರ ಮಾಹಿತಿ ಆಯೋಗವು ಅಕ್ಟೋಬರ್ 16ರಂದು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ಕಪ್ಪು ಹಣದ ಕುರಿತ ಮಾಹಿತಿಗಳನ್ನು 15 ದಿನದೊಳಗೆ ಒದಗಿಸುವಂತೆ ಕೋರಿತ್ತು.

 ಗೌಪ್ಯ ಮಾಹಿತಿ ಬಯಲಿಗ ಸಂಜೀವ್ ಚರ್ತುವೇದಿಯವರಿಗೆ ಪ್ರಧಾನಿ ಕಾರ್ಯಾಲಯ ಆರ್‌ಟಿಐ ಅರ್ಜಿಯೊಂದನ್ನು ಬರೆದು ಈಗಾಗಲೇ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದ್ದು, ಅದರ ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News