ಇರಾನ್ ಭೂಕಂಪ: 350ಕ್ಕೂ ಅಧಿಕ ಜನರಿಗೆ ಗಾಯ

Update: 2018-11-26 08:54 GMT

ಟೆಹ್ರಾನ್, ನ.26: ಪಶ್ಚಿಮ ಇರಾನ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ 361 ಮಂದಿ ಮೃತಪಟ್ಟಿರುವುದಾಗಿ ಇರಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಸರ್ಪೋಲ್-ಎ ಝಹಬ್ ಮತ್ತು ಖಸ್ರ್-ಎ-ಶಿರಿನ್ ನ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡಗಳು ಹಾನಿಗೀಡಾಗಿವೆ. ಕೆಲವು ಕಟ್ಟಡಗಳ ಗೋಡೆಗಳು ನೆಲಕ್ಕುರುಳಿವೆ. ಭೂಕಂಪನದಿಂದ ಹೆದರಿದ ಜನರು ಮನೆ, ಕಟ್ಟಡಗಳಿಂದ ಹೊರಗೋಡಿ ಬಂದಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News