ಕೈದಿಗಳಿಂದ ಮದ್ಯಸೇವನೆ, ಜೈಲಿನಿಂದಲೇ ವ್ಯಾಪಾರಿಯ ಬ್ಲ್ಯಾಕ್ ಮೇಲ್
Update: 2018-11-26 23:11 IST
ರಾಯ್‌ಬರೇಲಿ,ನ.26: ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿರುವ ಜಿಲ್ಲಾ ಕಾರಾಗೃಹದ ಒಳಗೆ ಕೈದಿಗಳು ಮದ್ಯ ಸೇವಿಸುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸರಣಗೊಂಡಿದ್ದು, ಘಟನೆ ಸಂಬಂಧ ಅಧಿಕಾರಿಗಳು ಆರು ಮಂದಿ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.
ಶೂಟರ್‌ಗಳಾದ ಸೊಹ್ರಾಬ್ ಹಾಗೂ ಅಂಶು ದೀಕ್ಷಿತ್ ಎಂಬವರು ಇತರ ನಾಲ್ವರೊಂದಿಗೆ ತಮ್ಮ ಜೈಲು ಕೊಠಡಿಯೊಳಗೆ ಮೋಜು ಮಾಡುತ್ತಿರುವ ಹಾಗೂ ಮೊಬೈಲ್ ಫೋನ್ ಬಳಸಿಕೊಂಡು ವ್ಯಾಪಾರಿಯಿಂದ ಹಣ ಕೀಳಲು ಬೆದರಿಕೆ ಕರೆಗಳನ್ನು ಮಾಡುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ವಿಡಿಯೋದಲ್ಲಿ ದೀಕ್ಷಿತ್ ಮೊಬೈಲ್‌ಫೋನ್‌ನಲ್ಲಿ ವ್ಯಕ್ತಿಯೊಬ್ಬನಿಗೆ ಕರೆ ಮಾಡಿ 10 ಸಾವಿರ ರೂ.ಗಳನ್ನು ಜೈಲರ್‌ಗೆ ಆತನ ನಿವಾಸಕ್ಕೆ ತಲುಪಿಸುವಂತೆಯೂ, ಐದು ಸಾವಿರ ರೂ.ಗಳನ್ನು ಉಪಜೈಲರ್‌ಗೆ ಕಳುಹಿಸುವಂತೆಯೂ ದೀಕ್ಷಿತ್ ವ್ಯಕ್ತಿಯೊಬ್ಬನಿಗೆ ತಿಳಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.