ಕರ್ತಾರ್ಪುರ ಸಾಹಿಬ್ ಕಾರಿಡರ್: ಉಪ ರಾಷ್ಟ್ರಪತಿ, ಪಂಜಾಬ್ ಮುಖ್ಯಮಂತ್ರಿ ಶಿಲಾನ್ಯಾಸ

Update: 2018-11-26 17:47 GMT

ಗುರುದಾಸಪುರ, ನ. 26: ಪಾಕಿಸ್ತಾನದಲ್ಲಿರುವ ಚಾರಿತ್ರಿಕ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಸಿಕ್ಖ್ ಯಾತ್ರಿಗಳು ತೆರಳಲು ಅನುಕೂಲವಾಗಲು ಕರ್ತಾರ್ಪುರ್ ಸಾಹಿಬ್ ಕಾರಿಡರ್‌ಗೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಗುರುದಾಸ್‌ಪುರ ಜಿಲ್ಲೆಯ ದೇರಾ ಬಾಬಾ ನಾನಕ್‌ನಿಂದ ಅಂತಾರಾಷ್ಟ್ರೀಯ ಗಡಿ ವರೆಗೆ ಕಾರಿಡರ್ ನಿರ್ಮಾಣ ಮಾಡಲು ಕೇಂದ್ರ ಸಂಪುಟ ನವೆಂಬರ್ 22ರಂದು ನಿರ್ಧಾರ ತೆಗೆದುಕೊಂಡಿತ್ತು.

ಪಾಕಿಸ್ತಾನದ ಪಂಜಾಬ್‌ನ ನಾರೋವಲ್ ಜಿಲ್ಲೆಯಲ್ಲಿರುವ ಶಕರ್‌ಗಢದಲ್ಲಿ ಕರ್ತಾರ್ಪುರ ಇದೆ. ಸಿಕ್ಖ್ ಧರ್ಮದ ಸ್ಥಾಪಕ ಗುರು ನಾನಕ್ ದೇವ್ ಅವರು 18 ಅಧಿಕ ವರ್ಷ ಇಲ್ಲಿ ಕಳೆದಿದ್ದರು. ಪಾಕಿಸ್ತಾನದ ಗಡಿಯಿಂದ ನಾಲ್ಕೈದು ಕಿ.ಮೀ. ದೂರದಲ್ಲಿರುವ ರಾವಿ ನಂದಿ ದಂಡೆಯಲ್ಲಿ ಕರ್ತಾರ್ಪುರ ಸಾಹಿಬ್ ಗುರುದ್ವಾರ ಇದೆ. ಈ ಹಿಂದೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಾರಿಡರ್ ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದರು. ಕೇಂದ್ರ ಸಚಿವರಾದ ಹರ್ಸಿಮ್ರಾತ್ ಕೌರ್ ಬಾದಲ್, ಹರ್ದೀಪ್ ಸಿಂಗ್ ಪುರಿ ಹಾಗೂ ವಿಜಯ್ ಸಾಂಪ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗುರುನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ವರ್ಷಗಳ ಕಾಲ ಸಂಭ್ರಮಾಚರಣೆಯನ್ನು ಪಂಜಾಬ್ ಸರಕಾರ ನವೆಂಬರ್ 23ರಂದು ಆರಂಭಿಸಿತ್ತು. ಪಾಕಿಸ್ತಾನದ ಭಾಗದಲ್ಲಿ ಕರ್ತಾರ್ಪುರ್ ಕಾರಿಡರ್ ಶಿಲಾನ್ಯಾಸ ಕಾರ್ಯಕ್ರಮವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 28ರಂದು ನೆರವೇರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News