ವಾಟ್ಸ್‌ಆ್ಯಪ್ ತೊರೆಯಲಿರುವ ಮುಖ್ಯ ವಾಣಿಜ್ಯ ಅಧಿಕಾರಿ ಅರೋರ

Update: 2018-11-27 16:52 GMT

ನ್ಯೂಯಾರ್ಕ್, ನ. 27: ಜನಪ್ರಿಯ ಸಂದೇಶ ವಿನಿಮಯ ಆ್ಯಪ್ ವಾಟ್ಸ್‌ಆ್ಯಪ್ ತೊರೆಯುವುದಾಗಿ ಅದರ ಮುಖ್ಯ ವಾಣಿಜ್ಯ ಅಧಿಕಾರಿ ನೀರಜ್ ಅರೋರ ಹೇಳಿದ್ದಾರೆ.

ಐಐಟಿ-ದಿಲ್ಲಿಯ ಹಳೆ ವಿದ್ಯಾರ್ಥಿಯಾಗಿರುವ ಅರೋರ, ಕಂಪೆನಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಅವರು ಈ ವರ್ಷದ ಆದಿ ಭಾಗದಲ್ಲಿ ವಾಟ್ಸ್‌ಆ್ಯಪ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ಹೇಳಲಾಗಿತ್ತು. ಆದಾಗ್ಯೂ, ಆ ಹುದ್ದೆಯನ್ನು ಬಳಿಕ ಕ್ರಿಸ್ ಡೇನಿಯಲ್ಸ್‌ಗೆ ವಹಿಸಲಾಗಿತ್ತು.

ಅವರು 2011ರಿಂದಲೂ ವಾಟ್ಸ್‌ಆ್ಯಪ್‌ನಲ್ಲಿದ್ದಾರೆ. ವಾಟ್ಸ್‌ಆ್ಯಪ್‌ನ ಸಹ ಸಂಸ್ಥಾಪಕ ಜಾನ್ ಕೌಮ್ ಕಂಪೆನಿಯನ್ನು ತೊರೆದ 7 ತಿಂಗಳ ಬಳಿಕ ಅರೋರ ಹೊರಹೋಗುತ್ತಿದ್ದಾರೆ.

‘‘ಕಾಮ್ ಕೌಮ್ ಮತ್ತು ಬ್ರಯಾನ್ ಆ್ಯಕ್ಟನ್ ನನ್ನನ್ನು ವಾಟ್ಸ್‌ಆ್ಯಪ್‌ಗೆ ಸೇರಿಸಿಕೊಂಡ ಬಳಿಕ ಏಳು ವರ್ಷವಾಯಿತು ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. ಅದೊಂದು ರೋಚಕ ಯಾತ್ರೆಯಾಗಿತ್ತು! ಈಗ ಮುಂದಕ್ಕೆ ಸಾಗುವ ಸಮಯ ಬಂದಿದೆ. ಆದರೆ, ಪ್ರತಿ ದಿನವೂ ವಿವಿಧ ರೀತಿಗಳಲ್ಲಿ ಜನರನ್ನು ತಲುಪುವುದನ್ನು ವಾಟ್ಸ್‌ಆ್ಯಪ್ ಮುಂದುವರಿಸುವುದನ್ನು ನೋಡಲು ನಾನು ಕಾಯುತ್ತಿದ್ದೇನೆ’’ ಎಂದು ಸೋಮವಾರ ಅರೋರ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News