ಕೆಸಿಆರ್ ಲಂಡನ್‌ಗೆ ತೆರಳಿ 5 ವರ್ಷ ವಾಸಿಸಬೇಕು: ಮೋದಿ

Update: 2018-11-27 17:26 GMT

 ಹೊಸದಿಲ್ಲಿ, ನ. 27: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ರಾಜ್ಯದ ಜನರಿಗೆ ನೀಡಿದ ಬೇಡಿಕೆ ಈಡೇರಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಕೆ. ಚಂದ್ರಶೇಖರ್ ರಾವ್ ಅವರು ಆಯ್ಕೆಯಾದ ಮುಖ್ಯಮಂತ್ರಿ. ಅವರು ನಿಝಾಮಾಬಾದ್ ಅನ್ನು ಲಂಡನ್ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ಅವರು ಹೇಳಿದರು.

 ಅವರು ನಿಝಾಮಾಬಾದ್ ಅನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಅದು ಆಗಲಿಲ್ಲ. ಇಂದು ಜನರು ಮೂಲಭೂತ ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

 ತಾನು ಇಲ್ಲಿ ತೆರಳುತ್ತಿದ್ದಾಗ, ಈ ನಗರದ ವೈಮಾನಿಕ ಸಮೀಕ್ಷೆಗೆ ಅವಕಾಶ ಮಾಡಿ ಕೊಂಡುವಂತೆ ಹಾಗೂ ಅಭಿವೃದ್ಧಿ ತೋರಿಸುವಂತೆ ಹೆಲಿಕಾಪ್ಟರ್‌ನ ಪೈಲೆಟ್‌ನಲ್ಲಿ ವಿನಂತಿಸಿದ್ದೆ. ತನಗೆ ಆಶ್ಚರ್ಯವಾಯಿತು. ತನಗೆ ಯಾವುದೇ ರೀತಿಯ ಅಭಿವೃದ್ಧಿ ಕಾಣಲಿಲ್ಲ. ಬಡ ನಗರಗಳು ಕೂಡ ನಿಝಾಮಾಬಾದ್‌ಗಿಂತ ಚೆನ್ನಾಗಿ ಕಂಡು ಬಂದವು ಎಂದು ಮೋದಿ ಹೇಳಿದ್ದಾರೆ.

ಮುಖ್ಯಮಂತ್ರಿ ಅವರು ಲಂಡನ್‌ಗೆ ತೆರಳಿ ಅಲ್ಲಿ 5 ವರ್ಷ ನೆಲೆಸಬೇಕು. ಅನಂತರ ಹಿಂದಿರುಗಬೇಕು ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಆಗುವುದಕ್ಕಿಂತ ಮುನ್ನ ಕೆಸಿಆರ್ ಪ್ರತಿ ಮನೆ ಗೋದಾವರಿಯಿಂದ ನೀರು ಪಡೆಯಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಅವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News