ಪಾಕ್‌ನಲ್ಲಿ ನಡೆಯುವ ಸಾರ್ಕ್ ಶೃಂಗ ಸಭೆಯಲ್ಲಿ ಭಾರತ ಭಾಗಿಯಾಗುವುದಿಲ್ಲ: ಸುಶ್ಮಾ ಸ್ವರಾಜ್
ಹೊಸದಿಲ್ಲಿ, ನ.28: ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಭಾರತ ಹಾಜರಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಶ್ಮಾ ಸ್ವರಾಜ್ ಇಂದು ಹೇಳಿದ್ದಾರೆ.
‘‘ಪಾಕಿಸ್ತಾನವು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸುವ ತನಕ ಆ ದೇಶದೊಂದಿಗೆ ಮಾತುಕತೆ ಪ್ರಶ್ನೆಯಿಲ್ಲ. ಸಾರ್ಕ್ ಸಮ್ಮೇಳನದಲ್ಲಿ ನಾವು ಭಾಗಿಯಾಗುವುದಿಲ್ಲ. ನಾನು ಈಗಾಗಲೇ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೇನೆ. ಸಮಗ್ರ ದ್ವಿಪಕ್ಷೀಯ ಮಾತುಕತೆ ಆರಂಭಿಸಿದ್ದು ನಾನೇ. ಆದರೆ ಆ ನಂತರ ಪಠಾಣ್‌ಕೋಟ್‌ನಲ್ಲಿ, ಯೂರಿನಲ್ಲಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ದ್ವಿಪಕ್ಷೀಯ ಮಾತುಕತೆ ಹಾಗೂ ಉಭಯ ದೇಶಗಳ ಕರ್ತರ್‌ಪುರ್ ಕಾರಿಡಾರ್ ಯೋಜನೆ ಎರಡೂ ವಿಭಿನ್ನ ವಿಚಾರಗಳಾಗಿವೆ. ಕಳೆದ 20 ವರ್ಷಗಳಿಂದ ಭಾರತ ಸರಕಾರ ಕರ್ತರ್‌ಪುರ್ ಯೋಜನೆಗಾಗಿ ಆಗ್ರಹಿಸುತ್ತಿತ್ತು. ಇದೀಗ ಮೊದಲ ಬಾರಿ ಪಾಕ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಸಂತೋಷವಾಗುತ್ತಿದೆ. ಕರ್ತರ್‌ಪುರ್ ಯೋಜನೆಯಿಂದಾಗಿ ಉಭಯ ದೇಶಗಳ ನಡುವೆ ಮಾತುಕತೆ ಪುನರಾರಂಭವಾಗದು ಎಂದರು.