ಮಧ್ಯಪ್ರದೇಶ: ಇವಿಎಂ ಜೊತೆ ಚುನಾವಣಾ ಸಿಬ್ಬಂದಿ ತಂಗಿದ್ದ ಹೋಟೆಲ್ ಬಿಜೆಪಿ ನಾಯಕನದ್ದು

Update: 2018-11-29 06:44 GMT

ಶಾಜಾಪುರ್, ನ.29: ಇಲ್ಲಿನ ಶುಜಲ್ಪುರದಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾ ಸಿಬ್ಬಂದಿ ಇವಿಎಂಗಳ ಸಹಿತ ತಂಗಿದ್ದ ಹೋಟೆಲ್ ಬಿಜೆಪಿ ನಾಯಕನಿಗೆ ಸೇರಿದ್ದು ಎಂದು news18.com ವರದಿ ಮಾಡಿದೆ. ಹೊಟೇಲ್ ನಲ್ಲಿ ಸಿಬ್ಬಂದಿ ಇವಿಎಂಗಳ ಜೊತೆ ತಂಗಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಶುಜಲ್ಪುರದ ರಾಜಮಹಲ್ ಹೊಟೇಲ್ ನಲ್ಲಿ ಚುನಾವಣಾ ಸಿಬ್ಬಂದಿ ತಂಗಿದ್ದರು ಎನ್ನಲಾಗಿದೆ. ಚುನಾವಣಾಧಿಕಾರಿ ಹಾಗು ಚುನಾವಣಾ ಆಯೋಗದ ಆದೇಶಕ್ಕೆ ವಿರುದ್ಧವಾಗಿ ಈ ಸಿಬ್ಬಂದಿ ಹೊಟೇಲ್ ನಲ್ಲಿ ತಂಗಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News