ರಿಲಯನ್ಸ್ ಜಿಯೋ ಬೆಂಬಲಿಸುವ ಕೇಂದ್ರ ಸರಕಾರ ಬಿಎಸ್ಸೆನ್ನೆಲ್ ಅನ್ನು ನಿರ್ಲಕ್ಷಿಸುತ್ತಿದೆ: ಉದ್ಯೋಗಿಗಳ ಸಂಘಟನೆ ಆರೋಪ

Update: 2018-11-29 13:32 GMT

ಹೊಸದಿಲ್ಲಿ, ನ.29: ಟೆಲಿಕಾಂ ಕ್ಷೇತ್ರದ ಆರ್ಥಿಕ ಸಮಸ್ಯೆಗಳಿಗೆ ರಿಲಯನ್ಸ್ ಜಿಯೋ ಸಂಸ್ಥೆಯನ್ನು ದೂಷಿಸಿರುವ ಬಿಎಸ್ಸೆನ್ನೆಲ್ ಉದ್ಯೋಗಿಗಳ ಸಂಘಟನೆಗಳು ಸರಕಾರವು ಜಿಯೋ ಸಂಸ್ಥೆಯನ್ನು ಅನಗತ್ಯ ಉತ್ತೇಜಿಸಿ ಬಿಎಸ್ಸೆನ್ನೆಲ್ ಅನ್ನು ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 3ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿವೆ.

ಬಿಎಸ್ಸೆನ್ನೆಲ್ ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಮತ್ತು ಅಧಿಕಾರಿಗಳು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಲ್ ಯೂನಿಯನ್ಸ್ ಎಂಡ್ ಅಸೋಸಿಯೇಶನ್ಸ್ ಆಫ್ ಬಿಎಸ್ಸೆನ್ನೆಲ್ (ಎಯುಎಬಿ) ತಿಳಿಸಿದೆ.

ಜಿಯೋ ಎದುರು ಬಿಎಸ್ಸೆನ್ನೆಲ್ ಸ್ಪರ್ಧೆಗಿಳಿಯುವುದು ಬೇಡವೆಂಬ ಉದ್ದೇಶದಿಂದ ಸರಕಾರವು ಬಿಎಸ್ಸೆನ್ನೆಲ್ ಗೆ 4 ಜಿ ಸ್ಪೆಕ್ಟ್ರಂ ಒದಗಿಸಿಲ್ಲ ಎಂದು ಉದ್ಯೋಗಿಗಳ ಯೂನಿಯನ್ ಆರೋಪಿಸಿದೆ. ಬಿಎಸ್ಸೆನ್ನೆಲ್ ಗೆ 4ಜಿ ಸ್ಪೆಕ್ಟ್ರಂ ಕೂಡಲೇ ಒದಗಿಸಬೇಕು, ಉದ್ಯೋಗಿಗಳ ವೇತನ ಪರಿಷ್ಕರಣೆ, ನಿವೃತ್ತ ಉದ್ಯೋಗಿಗಳ ಪಿಂಚಣಿ ಪರಿಷ್ಕರಣೆ ಇವೇ ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಮುಷ್ಕರ ನಡೆಯಲಿದೆ ಎಂದು ಯೂನಿಯನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News