×
Ad

ಈ ಬಾಲಿವುಡ್ ನಟನ ಪೂರ್ವಿಕರ ಮನೆ ಇನ್ನು ಪಾಕ್ ನಲ್ಲಿ ಮ್ಯೂಸಿಯಂ !

Update: 2018-11-29 20:18 IST

ಇಸ್ಲಾಮಾಬಾದ್, ನ. 29: ಬಾಲಿವುಡ್ ನಟ ರಿಶಿ ಕಪೂರ್ ಮನವಿ ಮೇರೆಗೆ ಪಾಕಿಸ್ತಾನದ ಕಿಸ್ಸಾ ಖ್ವಾನಿ ಬಝಾರ್‌ನಲ್ಲಿರುವ ಅವರ ಪೂರ್ವಿಕರ ಮನೆಯನ್ನು ಮ್ಯೂಸಿಯಂ ಮಾಡಲು ಅಲ್ಲಿನ ಸರಕಾರ ಉದ್ದೇಶಿಸಿದೆ.

ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಭಾರತೀಯ ಪತ್ರಕರ್ತರೊಂದಿಗೆ ಬುಧವಾರ ರಾತ್ರಿ ಮಾತನಾಡಿದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ, ಸರಕಾರದ ಯೋಜನೆಗಳ ಬಗ್ಗೆ ಮಾತನಾಡಿದರು.

‘‘ಈ ಬಗ್ಗೆ ರಿಶಿ ಕಪೂರ್ ಕರೆ ಮಾಡಿದ್ದರು. ತನ್ನ ಪೂರ್ವಿಕರ ಮನೆಯನ್ನು ಮ್ಯೂಸಿಯಂ ಆಗಿ ಅಥವಾ ಒಂದು ರೀತಿಯ ಸಂಸ್ಥೆಯಾಗಿ ಪರಿವರ್ತಿಸಬೇಕು ಎಂದು ಅವರು ಹೇಳಿದ್ದರು’’ ಎಂದರು.

‘‘ಹಾಗಾಗಿ, ಅವರ ಮನೆಯನ್ನು ನಾವು ಮ್ಯೂಸಿಯಂ ಮಾಡುತ್ತಿದ್ದೇವೆ ಎನ್ನುವ ವಿಷಯವನ್ನು ನೀವು ಅವರಿಗೆ ತಿಳಿಸಬಹುದು’’ ಎಂದು ವಿದೇಶ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಂತರಿಕ ಖಾತೆಯ ಸಹಾಯಕ ಸಚಿವ ಶೆಹರ್‌ಯಾರ್ ಖಾನ್ ಅಫ್ರಿದಿ, 2016ರಲ್ಲಿ ನಾನು ಜೈಪುರಕ್ಕೆ ಹೋಗಿದ್ದಾಗ ಮನೆಗೆ ಸಂಬಂಧಿಸಿ ರಿಶಿ ಕಪೂರ್ ನನಗೆ ಫೋನ್ ಮಾಡಿದ್ದರು ಎಂದು ಹೇಳಿದರು.

ಆ ಸಮಯದಲ್ಲಿ ಅಫ್ರಿದಿ ಖೈಬರ್-ಪಖ್ತೂಂಖ್ವ ರಾಜ್ಯದ ಸಂಸದರಾಗಿದ್ದರು ಹಾಗೂ ಇಮ್ರಾನ್ ಖಾನ್‌ರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷವು ಪ್ರತಿಪಕ್ಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News