ಮೋದಿ ಆಡಳಿತದಲ್ಲಿ ನಿರ್ಮಿಸಲ್ಪಟ್ಟ ರಸ್ತೆಗೆ ಮಕ್ಕಳು ಚಪ್ಪಲಿ ಕಳಚಿಟ್ಟು ಹತ್ತಿದರೇ?

Update: 2018-11-29 17:17 GMT

ಗ್ರಾಮವೊಂದರಲ್ಲಿ ಹೊಸದಾಗಿ ಪ್ರಪ್ರಥಮ ಬಾರಿಗೆ ರಸ್ತೆ ನಿರ್ಮಾಣವಾದಾಗ ಮಕ್ಕಳ ಸಂತೋಷ ಎನ್ನುವ ಅರ್ಥ ಬರುವ ಫೋಟೊವೊಂದನ್ನು ನವೆಂಬರ್ 29ರಂದು ಪವನ್ ದುರಾನಿ ಎಂಬವರು ಟ್ವೀಟ್ ಮಾಡಿದ್ದರು. “ಪ್ರಪ್ರಥಮ ಬಾರಿಗೆ ಕೆಲ ಕುಗ್ರಾಮಗಳಲ್ಲಿ ರಸ್ತೆ ನಿರ್ಮಾಣವಾದಾಗ ಇದು ನಡೆಯುತ್ತದೆ. ಧನ್ಯವಾದ ಪ್ರಧಾನಿ ನರೇಂದ್ರ ಮೋದಿ” ಎಂದು ಬರೆದಿದ್ದ ಅವರು ಫೋಟೊವೊಂದನ್ನು ಟ್ವೀಟ್ ಮಾಡಿದ್ದರು.

ಗ್ರಾಮವೊಂದರಲ್ಲಿ ನಿರ್ಮಾಣವಾದ ರಸ್ತೆಗೆ ಚಪ್ಪಲಿ ಕಳಚಿಟ್ಟು ಮಕ್ಕಳು ಹತ್ತಿರುವ ಫೋಟೊ ಇದಾಗಿತ್ತು. ಸ್ವತಃ ಪ್ರಧಾನಿ ಮೋದಿಯೇ ಫಾಲೋ ಮಾಡುತ್ತಿರುವ ದುರಾನಿ ನಂತರ ಟ್ವೀಟನ್ನು ಡಿಲಿಟ್ ಮಾಡಿದ್ದರು. ಆದರೆ ಅದು 2000 ಬಾರಿ ರಿಟ್ವೀಟ್ ಆಗಿದ್ದು, 5000 ಲೈಕ್ ಗಳು ಲಭಿಸಿತ್ತು. ಫೇಸ್ಬುಕ್ ನಲ್ಲೂ ಈ ಫೋಟೊ ವೈರಲ್ ಆಗಿತ್ತು.

ವಾಸ್ತವವೇನು?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೊ ಇಂಡೋನೇಶ್ಯದ ಗ್ರಾಮವೊಂದರದ್ದು ಹೊರತು ಮೋದಿ ಆಡಳಿತದಲ್ಲಿ ಭಾರತದಲ್ಲಿ ನಿರ್ಮಾಣವಾದದ್ದಲ್ಲ. 2018ರಅಕ್ಟೋಬರ್ 15ರಂದು The Quebec Times ವೆಬ್ ಸೈಟ್ ನಲ್ಲಿ ವರದಿಯೊಂದು ಪ್ರಕಟವಾಗಿದ್ದು, ಅದರಲ್ಲಿ ಈ ಫೋಟೊಗಳನ್ನು ಕಾಣಬಹುದಾಗಿದೆ. ಇನ್ನೂ ಕೆಲವು ವೆಬ್ ಸೈಟ್ ಗಳಲ್ಲಿ ಈ ಫೋಟೊಗಳನ್ನು ಅಕ್ಟೋಬರ್ 1,2 ಮತ್ತು 3ರಂದು ಪ್ರಕಟಿಸಲಾಗಿದೆ. ಪ್ರಪ್ರಥಮ ಬಾರಿಗೆ ಇಂಡೋನೇಶ್ಯಾದ ಹಳ್ಳಿಯೊಂದಕ್ಕೆ ರಸ್ತೆ ಸಂಪರ್ಕ ಉದ್ಘಾಟನೆಯಾದಾಗ ಆ ಗ್ರಾಮದ ಮಕ್ಕಳು ಚಪ್ಪಲಿ ಕಳಚಿಟ್ಟು ರಸ್ತೆಗೆ ಹತ್ತಿದ್ದರು. ಈ ಫೊಟೊವನ್ನು ಪ್ರಧಾನಿ ಮೋದಿಯ ಪ್ರಶಂಸೆಗೆ ಬಳಸಿಕೊಳ್ಳಲಾಗಿದೆ.

ಇಂಡೋನೇಶ್ಯಾದ ಪ್ರಸಿದ್ಧ ವೆಬ್ ಸೈಟ್ brilio.net ಆಗಸ್ಟ್ 27ಕ್ಕೆ ಈ ಸುದ್ದಿಯನ್ನು ಪ್ರಕಟಿಸಿದೆ. ಆ ಸುದ್ದಿಯ ಲಿಂಕ್ ಈ ಕೆಳಗಿದೆ.

http://bit.ly/2SkWdgl

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News