ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶ ಹಿತಾಸಕ್ತಿಗೆ ಪೂರಕವಾಗಿಲ್ಲ: ಇಮ್ರಾನ್ ಖಾನ್

Update: 2018-11-29 17:50 GMT

ಇಸ್ಲಾಮಾಬಾದ್, ನ. 29: ಭಯೋತ್ಪಾದನೆಗೆ ನಮ್ಮ ನೆಲವನ್ನು ಬಳಸಿಕೊಳ್ಳಲು ಯಾರಿಗಾದರೂ ಅವಕಾಶ ನೀಡುವುದು ಪಾಕಿಸ್ತಾನದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದಾರೆ.

ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ವಿಷಯದಲ್ಲಿ ಪಾಕಿಸ್ತಾನದ ನಾಗರಿಕ ಸರಕಾರ ಮತ್ತು ಸೇನಾ ನಾಯಕತ್ವದ ನಡುವೆ ಸಹಮತ ಇದೆ ಎಂಬುದಾಗಿ ಹೇಳಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಆದಾಗ್ಯೂ, ಈ ವಿಷಯದಲ್ಲಿ ಪಾಕಿಸ್ತಾನ ಪ್ರಯತ್ನವನ್ನಷ್ಟೇ ಮಾಡಬಹುದು ಎಂಬುದಾಗಿ ಪ್ರಧಾನಿ ಕಚೇರಿಯಲ್ಲಿ ತನ್ನನ್ನು ಭೇಟಿಯಾದ ಭಾರತೀಯ ಪತ್ರಕರ್ತರ ಗುಂಪಿನೊಂದಿಗೆ ಮಾತನಾಡಿದ ಖಾನ್ ಹೇಳಿದರು.

‘‘ನಾವು ಪ್ರಯತ್ನಿಸಬಹುದು, ಆದರೆ ಉಳಿದದ್ದು ಭಾರತಕ್ಕೆ ಬಿಟ್ಟದ್ದು. ನಾವು ಬೇರೆ ಏನು ಮಾಡಬಹುದು’’ ಎಂದು ಅವರು ಹೇಳಿದರು. ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದು ಗುರುವಾರಕ್ಕೆ 100 ದಿನಗಳು ತುಂಬಿದವು.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆಯನ್ನು ಪುನಾರಂಭಿಸಲು ಭಾರತದಲ್ಲಿ ಚುನಾವಣೆ ಮುಗಿಯುವವರೆಗೆ ಕಾಯಲು ಪಾಕಿಸ್ತಾನ ಸಿದ್ಧವಿದೆ ಎಂದು ಇಮ್ರಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News