ಕಸ್ಟಡಿಯಲ್ಲಿ ಸತ್ತವರ ವಿವರಗಳನ್ನು ನೀಡಿ: ಸಿರಿಯಕ್ಕೆ ವಿಶ್ವಸಂಸ್ಥೆ ಆಗ್ರಹ

Update: 2018-11-29 17:51 GMT

ಜಿನೇವ, ನ. 29: ನಾಪತ್ತೆಯಾದವರು ಏನಾದರು ಎನ್ನುವುದನ್ನು ಅವರ ಸಂಬಂಧಿಕರಿಗೆ ತಿಳಿಸಿ ಹಾಗೂ ಕಸ್ಟಡಿಯಲ್ಲಿ ಸತ್ತವರ ಅಥವಾ ಮರಣ ದಂಡನೆಗೊಳಗಾದವರ ವೈದ್ಯಕೀಯ ದಾಖಲೆಗಳು ಮತ್ತು ದೇಹಗಳನ್ನು ಅವರಿಗೆ ಒಪ್ಪಿಸಿ ಎಂದು ವಿಶ್ವಸಂಸ್ಥೆಯ ಯುದ್ಧಾಪರಾಧಗಳ ತನಿಖಾಧಿಕಾರಿಗಳು ಬುಧವಾರ ಸಿರಿಯಕ್ಕೆ ಕರೆ ನೀಡಿದ್ದಾರೆ.

ನ್ಯಾಯ ಸಿಗದೆ ಸುಮಾರು 8 ವರ್ಷ ಹಳೆಯ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಶ್ವತ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಸಿರಿಯಾ ಕುರಿತ ಅಂತಾರಾಷ್ಟ್ರೀಯ ತನಿಖಾ ಆಯೋಗ ಹೇಳಿದೆ.

ಹಲವಾರು ವರ್ಷಗಳ ಮೌನದ ಬಳಿಕ, ಸಿರಿಯ ಅಧಿಕಾರಿಗಳು ಮೃತಪಟ್ಟಿರುವರೆನ್ನಲಾದ ಸಾವಿರಾರು ಜನರ ಹೆಸರುಗಳನ್ನು ಈ ವರ್ಷ ಬಿಡುಗಡೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News