ವಿಚ್ಚೇದನ ದಾವೆ ಹಿಂದೆ ತೆಗೆದ ತೇಜ್ ಪ್ರತಾಪ್
Update: 2018-11-29 23:48 IST
ಪಾಟ್ನಾ, ನ. 29: ತನ್ನ 6 ತಿಂಗಳ ಪತ್ನಿ ಐಶ್ವರ್ಯಾ ರಾಯ್ ವಿರುದ್ಧ ಪಾಟ್ನಾ ಕುಟುಂಬ ನ್ಯಾಯಾಲಯದಲ್ಲಿ ಸಲ್ಲಿಸಲಾದ ವಿಚ್ಚೇದನ ದಾವೆಯನ್ನು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ಹಾಗೂ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಹಿಂದೆ ತೆಗೆದಿದ್ದಾರೆ.
ಹೊಂದಾಣಿಕೆ ಸಮಸ್ಯೆ ಉಲ್ಲೇಖಿಸಿ ಆರ್‌ಜೆಡಿ ಶಾಸಕಿ ಚಂದ್ರಿಕಾ ರಾಯ್ ಪುತ್ರಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ದೊರೋಗಾ ಪ್ರಸಾದ್ ರಾಯ್ ಅವರ ಮೊಮ್ಮಗಳು ಐಶ್ವರ್ಯಾ ವಿರುದ್ಧ ತೇಜ್ ಪ್ರತಾಪ್ ನವೆಂಬರ್ 2ರಂದು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಹೆತ್ತವರ ಒತ್ತಡದ ಹಿನ್ನೆಲೆಯಲ್ಲಿ ತಾನು ಈ ವರ್ಷ ಮೇಯಲ್ಲಿ ಎಂಬಿಎ ಪದವೀಧರೆ ಐಶ್ವರ್ಯಾ ಅವರನ್ನು ವಿವಾಹವಾದೆ. ವಿಭಿನ್ನ ಹಿನ್ನೆಲೆಯಿಂದ ಬಂದ ನಮಗಿಬ್ಬರಿಗೆ ಹೊಂದಾಣಿಕೆ ಆಗುತ್ತಿಲ್ಲ. ಎಂದು ಮಾಧ್ಯಮದೊಂದಿಗಿನ ಸಂವಹನ ಸಂದರ್ಭ ಅವರು ಹೇಳಿದ್ದರು.