×
Ad

ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಅಝರುದ್ದೀನ್ ಆಯ್ಕೆ

Update: 2018-11-30 16:50 IST

ಹೊಸದಿಲ್ಲಿ, ನ.30: ಕ್ರಿಕೆಟಿಗ ಹಾಗೂ ರಾಜಕಾರಿಣಿ ಮುಹಮ್ಮದ್ ಅಝರುದ್ದೀನ್ ತೆಲಂಗಾಣ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.

ತೆಲಂಗಾಣ ರಾಜ್ಯದಲ್ಲಿ ಡಿ.7 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೆಲಂಗಾಣ ಕಾಂಗ್ರೆಸ್‌ನಲ್ಲಿ ಹೊಸ ನೇಮಕಗಳನ್ನು ಮಾಡಿದ್ದು, ಬಿಎಂ ವಿನೋದ್ ಕುಮಾರ್ ಹಾಗೂ ಜಾಫರ್ ನಾವೇದ್‌ರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದು, ರಾಜ್ಯ ಘಟಕದಲ್ಲಿ 8 ನೂತನ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಾಲ್ವರು ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿದ್ದಾರೆ.

55 ವರ್ಷದ ಭಾರತದ ಮಾಜಿ ಕ್ರಿಕೆಟ್ ನಾಯಕ ಅಝರುದ್ದೀನ್ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್‌ನಿಂದ ಉತ್ತರಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸ್ಪರ್ಧಿಸಿದ್ದರು. 2009ರಲ್ಲಿ ಉ.ಪ್ರ.ದ ಮೊರಾದಾಬಾದ್‌ನಿಂದ ಗೆಲುವು ಸಾಧಿಸಿದ್ದ ಅಝರ್ 2014ರಲ್ಲಿ ರಾಜಸ್ಥಾನದ ಟೊಂಕ್-ಸವೈ ಮಾಧೋಪುರ್ ಕ್ಷೇತ್ರದಿಂದ ಸೋತಿದ್ದರು.

ತವರು ರಾಜ್ಯ ತೆಲಂಗಾಣದ ಸಿಕಂದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈ ವರ್ಷಾರಂಭದಲ್ಲಿ ಅಝರುದ್ದೀನ್ ಬಯಕೆ ವ್ಯಕ್ತಪಡಿಸಿದ್ದರು. ಕಳೆದ ವರ್ಷ ತೆಲಂಗಾಣ ಕಾಂಗ್ರೆಸ್ ಘಟಕ ಅಝರುದ್ದೀನ್‌ಗೆ ರಾಜ್ಯ ಅಸೆಂಬ್ಲಿ ಅಥವಾ 2019ರ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ವಿನಂತಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News