×
Ad

ಗೃಹ ಬಳಕೆ ಗ್ಯಾಸ್ ಸಿಲಿಂಡರ್ ದರ ಇಳಿಕೆ

Update: 2018-11-30 19:07 IST

ಹೊಸದಿಲ್ಲಿ, ನ.30: ಗೃಹ ಬಳಕೆ ಗ್ಯಾಸ್ ಸಿಲಿಂಡರ್ ದರ ಇಳಿಕೆಯಾಗಿದ್ದು, ಅಡುಗೆ ಅನಿಲ ಸಿಲಿಂಡರ್ ದರ ರೂ.6.52ರಷ್ಟು ಕಡಿತವಾಗಿದೆ. ಗೃಹ ಬಳಕೆಯ ಸಬ್ಸಿಡಿಯುಳ್ಳ ಗ್ಯಾಸ್ ಸಿಲಿಂಡರ್ ಮತ್ತು ಸಬ್ಸಿಡಿರಹಿತ ಗ್ಯಾಸ್ ಸಿಲಿಂಡರ್ ದರ ಇಳಿಕೆಯಾಗಿದೆ.

ದೇಶದ ರಾಜಧಾನಿ ದಿಲ್ಲಿಯಲ್ಲಿ 14.2 ಕೆ.ಜಿ ಗ್ಯಾಸ್ ಸಿಲಿಂಡರ್ ರೂ.500.90ಕ್ಕೆ ದೊರೆಯಲಿದೆ.  ಹಿಂದಿನ ದರ ರೂ. 507.42. ಕಳೆದ 6 ತಿಂಗಳಲ್ಲಿ ಸತತ ಏರಿಕೆಯ ಬಳಿಕ ಗ್ಯಾಸ್ ಸಿಲಿಂಡರ್ ದರ ಇಳಿಕೆಯಾಗಿದೆ.

ನ.1ರಂದು ಕೊನೆಯ ಬಾರಿ ಗ್ಯಾಸ್ ಸಿಲಿಂಡರ್ ಗೆ ರೂ.2.94 ಏರಿಕೆಯಾಗಿತ್ತು.  ಸಬ್ಸಿಡಿರಹಿತ ಗ್ಯಾಸ್ ಸಿಲಿಂಡರ್ ಗೆ ರೂ.133 ಇಳಿಕೆಯಾಗಿದ್ದು, ಡಿ.1, 2018ರಿಂದ ಹೊಸ ದರ ಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News