ಮರಾಠಾ ಮೀಸಲಾತಿಯ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಬಾರದು

Update: 2018-12-01 13:58 GMT

ಮುಂಬೈ, ಡಿ.1: ಮರಾಠರಿಗೆ ಮೀಸಲಾತಿ ಒದಗಿಸಿರುವ ವಿಷಯದಲ್ಲಿ ಯಾವುದೇ ಪಕ್ಷಗಳು ರಾಜಕೀಯ ಲಾಭ ಪಡೆಯಲು ಮುಂದಾಗಬಾರದು ಎಂದು ಶಿವಸೇನೆ ಬಿಜೆಪಿಗೆ ಪರೋಕ್ಷವಾಗಿ ಕುಟುಕಿದೆ.

  ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ , ಮರಾಠರು ಮೀಸಲಾತಿಯನ್ನು ಯಥೋಚಿತ ಗೌರವದೊಂದಿಗೆ ಪಡೆಯಬೇಕು . ಮರಾಠಾ ಮೀಸಲಾತಿ ವಿಷಯವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅತ್ಯಂತ ಜಾಣ್ಮೆಯಿಂದ ಹಾಗೂ ತಾಳ್ಮೆಯಿಂದ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದೆ.

ಮರಾಠಾರಿಗೆ ಮೀಸಲಾತಿ ನೀಡುವ ಮೊದಲು ಎಲ್ಲಾ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ಪಡೆಯಲಾಗಿದೆ. ಆದರೆ ಈ ಘೋಷಣೆ ಕೇವಲ ತೋರಿಕೆಯ ಘೋಷಣೆಯಾಗಬಾರದು. ಆಚರಣೆಗೆ ಬರಬೇಕು. ಕೆಲವೊಮ್ಮೆ ಘೋಷಣೆ ಮಾಡಲಾಗುತ್ತದೆ. ಆದರೆ ಬಳಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ , ಘೋಷಣೆ ಕಾರ್ಯರೂಪಕ್ಕೆ ಬರುವುದೇ ಇಲ್ಲ . ಮಹಾರಾಷ್ಟ್ರದ ಜನಸಂಖ್ಯೆಯ ಶೇ.30ರಷ್ಟಿರುವ ಮರಾಠರಲ್ಲಿ ಶೇ.70ರಷ್ಟು ಮಂದಿ ಇನ್ನೂ ಮಣ್ಣಿನ ಮನೆ ಅಥವಾ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಶೇ.91ರಷ್ಟು ಮರಾಠರ ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತಲೂ ಕಡಿಮೆಯಿದೆ.. ಸಮುದಾಯದ ಶೇ.24.2ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ(ಬಿಪಿಎಲ್). ಶೇ.70ಕ್ಕೂ ಹೆಚ್ಚು ಮಂದಿ ಸಣ್ಣ ರೈತರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಾವಿರಾರು ಕೃಷಿಕರಲ್ಲಿ ಮರಾಠರ ಪ್ರಮಾಣ ಹೆಚ್ಚಿದೆ ಎಂದು ಶಿವಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News