×
Ad

ನವದಂಪತಿ ಪ್ರಿಯಾಂಕಾ ಚೋಪ್ರಾ- ನಿಕ್‌ಗೆ ಪೆಟಾ ತರಾಟೆ

Update: 2018-12-03 21:27 IST

ಮುಂಬೈ, ಡಿ.3: ತಮ್ಮ ಮದುವೆಯ ಮೆರವಣಿಗೆಯಲ್ಲಿ ಆನೆಗಳು ಮತ್ತು ಕುದುರೆಗಳನ್ನು ಬಳಸಿದ್ದಕ್ಕಾಗಿ ನವದಂಪತಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ಗಾಯಕ ನಿಕ್ ಜೋನಾಸ್ ಅವರನ್ನು ಪ್ರಾಣಿಹಕ್ಕುಗಳ ಸಂಸ್ಥೆ ಪೆಟಾ ಇಂಡಿಯಾ ತರಾಟೆಗೆತ್ತಿಕೊಂಡಿದೆ.

ಪ್ರಿಯಾಂಕಾ ಮತ್ತು ನಿಕ್ ಶನಿವಾರ ಜೈಪುರದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತು ರವಿವಾರ ಹಿಂದು ಸಂಪ್ರದಾಯದಂತೆ ಮದುವೆಯಾಗಿದ್ದಾರೆ. “ಮದುವೆ ಮೆರವಣಿಗೆಗಳಲ್ಲಿ ಆನೆಗಳಿಗೆ ಸಂಕೋಲೆಗಳನ್ನು ತೊಡಿಸಲಾಗುತ್ತದೆ ಮತ್ತು ಕುದುರೆಗಳನ್ನು ಬಾರುಕೋಲುಗಳಿಂದ ಥಳಿಸಲಾಗುತ್ತದೆ. ಜನರು ಆನೆ ಸವಾರಿಗಳನ್ನು ತ್ಯಜಿಸುತ್ತಿದ್ದಾರೆ ಮತ್ತು ಕುದುರೆಗಳಿಲ್ಲದೆ ಮದುವೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನಿಮಗೆ ನಮ್ಮ ಶುಭಾಶಯಗಳು,ಆದರೆ ಅದು ಪ್ರಾಣಿಗಳಿಗೆ ಸಂತಸದ ದಿನವಾಗಿರಲಿಲ್ಲ” ಎಂದು ಪೆಟಾ ಟ್ವೀಟಿಸಿದೆ.

ಮದುವೆ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸಿದ್ದಕ್ಕಾಗಿ ಪ್ರಿಯಾಂಕಾರನ್ನು ಟ್ವಿಟರಿಗರು ಕಟುವಾಗಿ ಟೀಕಿಸಿದ್ದಾರೆ.

ಸ್ವತಃ ಅಸ್ತಮಾದಿಂದ ಬಳಲುತ್ತಿರುವ ಪ್ರಿಯಾಂಕಾ ದೀಪಾವಳಿಯ ಸಂದರ್ಭಲ್ಲಿ ಪಟಾಕಿಗಳನ್ನು ಸುಡದಂತೆ ಮತ್ತು ಮಾಲಿನ್ಯಮುಕ್ತ ದೀಪಗಳ ಹಬ್ಬವನ್ನು ಆಚರಿಸುವಂತೆ ಜನತೆಯನ್ನು ಉಪದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News