ಮುಂಬೈಯ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ಅನಾಹುತ
Update: 2018-12-03 22:05 IST
ಮುಂಬೈ, ಡಿ.3: ವಾಯುವ್ಯ ಮುಂಬೈನ ಗೋರೆಗಾಂವ್ ಸಮೀಪದ ಆರೇ ಅರಣ್ಯ ಪ್ರದೇಶದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ. ಜನರಲ್ ಎ.ಕೆ. ವೈದ್ಯ ಮಾರ್ಗದ ಇನ್ಫಿನಿಟಿ ಐಟಿ ಪಾರ್ಕ್ ಹಿಂಭಾಗ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯಿಂದ ಸಾವು-ನೋವು ಘಟಿಸಿದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸುಮಾರು 3ರಿಂದ 4 ಕಿ.ಮೀ. ದೂರದವರೆಗೆ ಬೆಂಕಿ ಹಬ್ಬಿದೆ.