ರಕ್ಷಣಾ, ಭದ್ರತಾ ಸಂಬಂಧ ವೃದ್ಧಿಗೆ ಅಮೆರಿಕ, ಭಾರತ ಒಪ್ಪಿಗೆ

Update: 2018-12-04 14:32 GMT

ವಾಶಿಂಗ್ಟನ್, ಡಿ. 4: ತಮ್ಮ ನಡುವಿನ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ವೃದ್ಧಿಸಲು ಅಮೆರಿಕ ಮತ್ತು ಭಾರತಗಳು ಒಪ್ಪಿಕೊಂಡಿವೆ.

 ಅಮೆರಿಕ ಪ್ರವಾಸದಲ್ಲಿರುವ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆತಿಥೇಯ ದೇಶದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್‌ರನ್ನು ಭೇಟಿಯಾದ ವೇಳೆ ರಕ್ಷಣಾ ಒಪ್ಪಂದ ಏರ್ಪಟ್ಟಿದೆ.

ಉಭಯ ದೇಶಗಳ ರಕ್ಷಣಾ ಸಚಿವರ ನಡುವಿನ ಈ ವರ್ಷದ ನಾಲ್ಕನೇ ಸುತ್ತಿನ ಮಾತುಕತೆಗಾಗಿ ನಿರ್ಮಲಾರನ್ನು ಮ್ಯಾಟಿಸ್ ಸೋಮವಾರ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಪೆಂಟಗನ್‌ಗೆ ಆಹ್ವಾನಿಸಿದರು.

ನಿರ್ಮಲಾ ಸೀತಾರಾಮನ್ ಐದು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರು ಬಳಿಕ, ರಕ್ಷಣಾ ಇಲಾಖೆಯ ರಕ್ಷಣಾ ಸಂಶೋಧನಾ ಘಟಕವನ್ನು ವೀಕ್ಷಿಸಲು ವಾಶಿಂಗ್ಟನ್‌ನಿಂದ ಕ್ಯಾಲಿಫೋರ್ನಿಯಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿಂದ ಹವಾಯಿಯಲ್ಲಿರುವ ಇಂಡೋ-ಪೆಸಿಫಿಕ್ ಕಮಾಂಡ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಲಿದ್ದಾರೆ.

‘‘ವಿಭಿನ್ನ ಇತಿಹಾಸಗಳು ಮತ್ತು ಸಂಸ್ಕೃತಿಗಳ ಹೊರತಾಗಿಯೂ, ಜಗತ್ತಿನ ಎರಡು ಅತಿ ದೊಡ್ಡ ಪ್ರಜಾಸತ್ತೆಗಳು ಸಮಾನ ವೌಲ್ಯಗಳು, ತತ್ವಗಳನ್ನು ಹೊಂದಿವೆ ಹಾಗೂ ನಿಯಮಾಧಾರಿತ ಜಾಗತಿಕ ವ್ಯವಸ್ಥೆಯನ್ನು ಗೌರವಿಸುತ್ತಿವೆ’’ ಎಂದು ಮ್ಯಾಟಿಸ್ ಈ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News