ಭಾರತ ನೀಡಿರುವ ಪೇಟೆಂಟ್‌ಗಳ ಸಂಖ್ಯೆಯಲ್ಲಿ 50 ಶೇ. ಹೆಚ್ಚಳ

Update: 2018-12-04 14:36 GMT

ವಿಶ್ವಸಂಸ್ಥೆ, ಡಿ. 4: ಭಾರತ ನೀಡಿರುವ ಪೇಟೆಂಟ್‌ಗಳ ಸಂಖ್ಯೆ 2017ರಲ್ಲಿ 50 ಶೇಕಡದಷ್ಟು ಹೆಚ್ಚಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ತಿಳಿಸಿದೆ.

ಭಾರತ 2016ರಲ್ಲಿ 8,248 ಪೇಟೆಂಟ್‌ಗಳನ್ನು ನೀಡಿದ್ದರೆ, ಕಳೆದ ವರ್ಷ 12,387 ಪೇಟೆಂಟ್‌ಗಳನ್ನು ನೀಡಿದೆ ಎಂದು ಜಿನೇವದಲ್ಲಿ ಸೋಮವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಜಾಗತಿಕ ಬೌದ್ಧಿಕ ಆಸ್ತಿ ಸಂಸ್ಥೆಯ ವರದಿ ‘ಜಾಗತಿಕ ಬೌದ್ಧಿಕ ಆಸ್ತಿ ಸೂಚಕಗಳು 2018’ ತಿಳಿಸಿದೆ.

2015ರಲ್ಲಿ 6,022 ಪೇಟೆಂಟ್‌ಗಳನ್ನು ನೀಡಲಾಗಿತ್ತು. ಅದಕ್ಕೆ ಹೋಲಿಸಿದರೆ ಕಳೆದ ವರ್ಷದ ಸಂಖ್ಯೆ ಬಹುತೇಕ ದ್ವಿಗುಣವಾಗಿದೆ.

ಕಳೆದ ವರ್ಷ ನೀಡಲಾದ ಪೇಟೆಂಟ್‌ಗಳ ಪೈಕಿ 1712 ಭಾರತದಲ್ಲಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಹೋಗಿವೆ ಹಾಗೂ 10,675 ವಿದೇಶಿಯರಿಗೆ ಹೋಗಿವೆ ಎಂದು ವರದಿ ತಿಳಿಸಿದೆ.

ವಿದೇಶಿಯರಿಗೆ ನೀಡಲಾಗಿರುವ ಪೇಟೆಂಟ್‌ಗಳಲ್ಲಿ ಗಣನೀಯ ಹೆಚ್ಚಳವಾಗಿದೆ. ಅದು ಒಟ್ಟು ಹೆಚ್ಚಳದ 85 ಶೇಕಡ ಆಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News