ಬಜಗೋಳಿ: ನೂರಾಲ್‍ಹುದಾ ಜುಮಾ ಮಸೀದಿಯ ನವೀಕೃತ ಕಟ್ಟಡ ಉದ್ಘಾಟಣೆ

Update: 2018-12-07 15:15 GMT

ಕಾರ್ಕಳ, ಡಿ. 7: ಬಜಗೋಳಿಯಲ್ಲಿ ನೂರಾಲ್‍ಹುದಾ ಜುಮಾ ಮಸೀದಿಯ ನವೀಕೃತ ಮಸೀದಿಯ ಕಟ್ಟಡ ಉದ್ಘಾಟಣೆಯು ಶುಕ್ರವಾರ ಕೆ.ಎಸ್. ಸಯ್ಯದ್ ಆಲೀ ತಂಙಳ್ ಕುಂಬೇಲ್‍ ಅವರ ನೇತೃತ್ವದಲ್ಲಿ ಜರಗಿತು. ಅಲ್ ಹಾಜ್. ಪಿ.ಎಮ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ ಮಸೀದಿ ವಕ್ಷ್ ನಿರ್ವಹಣೆಗೈದರು. ಅಬ್ದುರ್ರಹ್ಮಾನ್ ಮುಸ್ಲಿಯಾರ್ ನೆಲ್ಲಿಕಾರ ಅಧ್ಯಕ್ಷತೆ ವಹಿಸಿದ್ದರು.

ಮಸೀದಿಯ ಅಧ್ಯಕ್ಷ ಎಚ್. ಸುಲೈಮಾನ್ ಹಾಜಿ, ಗೌರವ ಅಧ್ಯಕ್ಷ ಸೈಯದ್‍ ಬಾವ, ಉಪಾಧ್ಯಕ್ಷ ಎನ್. ಕೆ. ಮಹಮ್ಮದ್, ಸಿ.ಎಚ್ ಪುತ್ತಾಕ, ಟಿ. ಮೂಸಬ್ಬ, ಅಬ್ದುಲ್ ಸಮದ್ ಮದನಿ ಸಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಸೀದಿಯ ಖತೀಬ್ ಎಮ್.ಎಸ್. ಅಬೂಬಕ್ಕರ್ ಸಿದ್ದೀಖ್ ಕಾರ್ಯಕ್ರಮ ಉದ್ಘಾಟಿಸಿ, ನಂತರ ಮಾತಾನಾಡಿದರು. ಎಚ್. ಮಹಮ್ಮದ್ ವೇಣೂರು ಕಾರ್ಯಕ್ರಮ ನಿರೂಪಿಸಿದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News