ವಸೀಂ ಅಂದ್ರಾಬಿ ಸಮಯಪ್ರಜ್ಞೆಗೆ ಭೇಷ್ ಎಂದ ಸಿಆರ್ ಪಿಎಫ್

Update: 2018-12-07 16:42 GMT

ಜಮ್ಮು, ಡಿ.7: ಉಗ್ರರ ಕಾರ್ಯಾಚರಣೆ ವೇಳೆ ಗಾಯಗೊಂಡ ಸೈನಿಕರೊಬ್ಬರಿಗೆ ನೆರವಾಗಲು ಧಾವಿಸಿದ ಫೋಟೊಗ್ರಾಫರ್ ವಸೀಂ ಅಂದ್ರಾಬಿಯವರಿಗೆ ಸಿಆರ್ ಪಿಎಫ್ ಧನ್ಯವಾದ ಸಲ್ಲಿಸಿದೆ.

ಲಷ್ಕರ್ ಎ ತೊಯ್ಬಾ ನಾಯಕ ನವೀದ್ ಜಾಟ್ ಹತ್ಯೆಗೈಯಲ್ಪಟ್ಟ ನವೆಂಬರ್ 28ರ ಸೇನಾ ಕಾರ್ಯಾಚರಣೆ ವೇಳೆ ಸೈನಿಕ ಪ್ರಣಾಮ್ ಸಿಂಗ್ ಗಾಯಗೊಂಡಿದ್ದರು. ಕೂಡಲೇ ವಸೀಂ ಧಾವಿಸಿ ಪ್ರಣಾಮ್ ರಿಗೆ ನೆರವಾದರು. ತಲೆಗೆ ಕಲ್ಲು ಬಿದ್ದದ್ದರಿಂದ ಪ್ರಣಾಮ್ ಸಿಂಗ್ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೂ ಕಲ್ಲುತೂರಾಟ ಮುಂದುವರಿದಿತ್ತು.

ಪ್ರಣಾಮ್ ರಿಗೆ ಕಲ್ಲೇಟು ಬಿದ್ದಾಗ ಸ್ಥಳಕ್ಕೆ ಧಾವಿಸಿದ್ದ ವಸೀಂ ಒಂದು ಭುಜದಲ್ಲಿ ಕ್ಯಾಮರಾ ನೇತಾಡಿಸಿ ಪ್ರಣಾಮ್ ರಿಗೆ ಹೆಗಲು ಕೊಟ್ಟಿದ್ದರು. “ಗಾಯಗೊಂಡ ಸೈನಿಕನಿಗೆ ನೆರವಾದ ಫೋಟೊಗ್ರಾಫರ್ ಗೆ ನಾವು ಅಭಾರಿಯಾಗಿದ್ದೇವೆ” ಎಂದು ಸಿಆರ್ ಪಿಎಫ್ ಡಿಜಿ ಆರ್.ಆರ್. ಭಟ್ನಾಗರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News