ಕುಂಜತ್ತೂರು: ಮಹ್ದನುಲ್ ಊಲೂಂ ಮದ್ರಸ ಕಟ್ಟಡ ಉದ್ಘಾಟನೆ

Update: 2018-12-08 09:07 GMT

ಮಂಜೇಶ್ವರ, ಡಿ.8: ಕುಂಜತ್ತೂರು ಜಮಾಅತ್ ಸಮಿತಿಯ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಮಹ್ದನುಲ್ ಉಲೂಂ ಮದ್ರಸಕ್ಕೆ ಕುಂಜತ್ತೂರು ಪ್ರವಾಸಿ ಫೋರಂ(ಜಿಸಿಸಿ) ನೂತನವಾಗಿ ನಿರ್ಮಿಸಿಕೊಟ್ಟಿರುವ ಕಟ್ಟಡ ಶುಕ್ರವಾರ ಉದ್ಘಾಟನೆಗೊಂಡಿತು.

ನೂತನ ಮದ್ರಸ ಕಟ್ಟಡವನ್ನು ಸಮಸ್ತ ಕೇರಳ ಜಂಯ್ಯತುಲ್ ಉಲಮಾದ ಅಧ್ಯಕ್ಷ ಶೈಖುನಾ ಅಸ್ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿದರು.

ಬಳಿಕ ಕುಂಜತ್ತೂರು ಮಸೀದಿ ಆವರಣದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನು ಕುಂಜತ್ತೂರು ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಆಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಡಾ ಕೆ.ಎ.ಖಾದರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ಜಿಫ್ರಿ ಮುತ್ತುಕೋಯ ತಂಙಳ್, ತ್ವಾಖಾ ಉಸ್ತಾದ್, ಅಥಾವುಲ್ಲ ತಂಙಳ್ ಹಾಗೂ ಕುಂಜತ್ತೂರು ಖತೀಬ್ ಹಾಶಿರ್ ಅಲ್ ಹಾಮಿದಿಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮೊಯ್ದಿನ್ ಕುಂಞಿ ಹಾಜಿ ಪ್ರಿಯಾ, ಇಬ್ರಾಹೀಂ ಹಾಜಿ ಕೆ.ಎ., ಸಯ್ಯದ್ ಎಂ.ಕೆ., ಎ. ಆರ್.ಅಬ್ದುಲ್ ರಹ್ಮಾನ್ ಹಾಜಿ, ಕೆ.ಕೆ.ಮುಹಮ್ಮದ್ ಫೈಝಿ, ತೌಸಿಫ್ ಆಹ್ಮದ್ ಹನೀಫಿ, ಪ್ರವಾಸಿ ಫೋರಂ ಕೋ ಆರ್ಡಿನೇಟರುಗಳಾದ ಅಮ್ಮಿ, ಅದ್ದು ಕುಂಜತ್ತೂರು, ಹಕೀಂ ಕುಂಜತ್ತೂರು ಮೊದಲಾದವರು ಉಪಸ್ಥಿತರಿದ್ದರು.

 ಮಗ್ರಿಬ್ ನಮಾಝ್ ಬಳಿಕ ಅಬೂಬಕರ್ ಸಿದ್ದೀಖ್ ಅಝ್ ಹರಿ ಪಯ್ಯನ್ನೂರು ಅವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News