ಜಮ್ಮು-ಕಾಶ್ಮೀರದಲ್ಲಿ 2018ರಲ್ಲಿ 223 ಭಯೋತ್ಪಾದಕರ ಹತ್ಯೆ

Update: 2018-12-09 06:14 GMT

ಶ್ರೀನಗರ, ಡಿ.9: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 2018ರಲ್ಲಿ ಗಲಭೆ ಜಾಸ್ತಿಯಾಗಿತ್ತು. ಈ ವರ್ಷ 223 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಇದೇ ವೇಳೆ 73 ನಾಗರಿಕರು ಮತ್ತು ಭದ್ರತಾ ಪಡೆಗಳ 77 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

2018ರಲ್ಲಿ ವಿದೇಶಿ ಮೂಲದ 93 ಮಂದಿ ಬಲಿಯಾಗಿದ್ದಾರೆ.  ಆದರೆ   2017ರಲ್ಲಿ ಕೊಲ್ಲಲ್ಪಟ್ಟ ವಿದೇಶಿಯರ ದಾಖಲೆ  ಸಿಕ್ಕಿಲ್ಲ.  ಪಾಕಿಸ್ತಾನ ಮೂಲದ ಭಯೋತ್ಪಾದಕರು   ಕಾಶ್ಮೀರದ ಸ್ಥಳೀಯರನ್ನು ಬಳಸಿಕೊಂಡು ಭಯೋತ್ಪಾದಕ  ಚಟುವಟಿಕೆಗಳಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಜಾಸ್ತಿಯಾಗಿರುವುದು ಬೆಳಕಿಗೆ ಬಂದಿದೆ.

 2018  ಜೂನ್​ 25 ರಿಂದ ಸೆಪ್ಟೆಂಬರ್ 14ರ ವರೆಗೆ 51 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಸೆಪ್ಟೆಂಬರ್ 15ರಿಂದ ಡಿಸೆಂಬರ್ 5 ರ ತನಕ 85 ಭಯೋತ್ಪಾದಕರನ್ನು ಕೊಲ್ಲಲಾಗಿದೆ.  ಸೆ.25ರಿಂದ ಡಿ.5ರ ತನಕ  ರಾಜ್ಯದಲ್ಲಿ ಕಲ್ಲು ತೂರಾಟ ಪ್ರಕರಣಗಳಲ್ಲಿ 2 ನಾಗರಿಕರು ಸಾವಿಗೀಡಾಗಿದ್ದಾರೆ ಮತ್ತು 170 ಮಂದಿ ಗಾಯಗೊಂಡಿದ್ಧಾರೆ.

ಕಾಶ್ಮೀರದಲ್ಲಿ  ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ವಿವರ 

                                                                       2017        2018

ಕೊಲ್ಲಲ್ಪಟ್ಟ ಭಯೋತ್ಪಾದಕರು                                   213         223

ವಿದೇಶಿ ಮೂಲದ ಭಯೋತ್ಪಾದಕರು                            --            093

ನಾಗರಿಕರ ಸಾವು                                                 040         077

ಭದ್ರತಾ ಸಿಬ್ಬಂದಿಗಳ  ಸಾವು                                   080         080

ಭಯೋತ್ಪಾದಕ ಘಟನೆಗಳು                                     342          429

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News