ಅಲಹಾಬಾದ್ ವಿವಿ ಇನ್ನು ಮುಂದೆ ಪ್ರಯಾಗ್‌ರಾಜ್ ವಿವಿ ?

Update: 2018-12-09 15:48 GMT

ಲಕ್ನೊ, ಡಿ.9: ಅಲಹಾಬಾದ್ ನಗರವನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣಗೊಳಿಸಿದ ಬಳಿಕ ಇದೀಗ ಅಲಹಾಬಾದ್ ವಿಶ್ವವಿದ್ಯಾನಿಲಯದ ಹೆಸರನ್ನು ಬದಲಾಯಿಸುವ ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ.

ಅಲಹಾಬಾದ್ ವಿವಿಯ ಹೆಸರನ್ನು ಪ್ರಯಾಗ್‌ರಾಜ್ ರಾಜ್ಯ ವಿವಿ ಎಂದು ಬದಲಾಯಿಸುವಂತೆ ವಿವಿಯ ಉಪಕುಲಪತಿ ರಾಜ್ಯಪಾಲರಿಗೆ ಪ್ರಸ್ತಾಪ ಮಾಡಿದ್ದಾರೆ. ಈ ಪ್ರಸ್ತಾಪ ಈಗ ಆದಿತ್ಯನಾಥ್ ಸರಕಾರದ ಮುಂದೆ ಇದೆ. ಸರಕಾರ ಇದಕ್ಕೆ ಅಂಗೀಕಾರ ನೀಡಿದ ಬಳಿಕ ಇದಕ್ಕೆ ರಾಜ್ಯಪಾಲರು ಅನುಮೋದನೆ ನೀಡಬೇಕು.

  ಕಳೆದ ಅಕ್ಟೋಬರ್‌ನಲ್ಲಿ ಅಲಹಾಬಾದ್ ನಗರಕ್ಕೆ ಉತ್ತರಪ್ರದೇಶದ ಸರಕಾರ ಪ್ರಯಾಗ್‌ರಾಜ್ ಎಂದು ಮರುನಾಮಕರಣಗೊಳಿಸಿದೆ. ಈ ಪ್ರದೇಶವು ಮೂರು ನದಿಗಳ ತ್ರಿವೇಣಿ ಸಂಗಮ ಸ್ಥಳವಾಗಿದ್ದು 500 ವರ್ಷದ ಹಿಂದೆ ಈ ಪ್ರದೇಶಕ್ಕೆ ಪ್ರಯಾಗ್‌ರಾಜ್ ಎಂದು ಹೆಸರಿತ್ತು ಎಂದು ಆದಿತ್ಯನಾಥ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News