ಅಫ್ಘಾನ್ ಫುಟ್ಬಾಲ್ ಒಕ್ಕೂಟದ ಮುಖ್ಯಸ್ಥ ಅಮಾನತು

Update: 2018-12-09 18:23 GMT

ಕಾಬೂಲ್, ಡಿ.9: ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಫ್ಘಾನಿಸ್ತಾನ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಪುರುಷ ಅಧಿಕಾರಿಗಳ ವಿರುದ್ಧ ಮಹಿಳಾ ಫುಟ್ಬಾಲ್ ತಂಡದ ಸದಸ್ಯರು ಮಾಡಿದ ಕಿರುಕುಳ ಆರೋಪದ ಕುರಿತು ಬ್ರಿಟನ್‌ನ ‘ಗಾರ್ಡಿಯನ್’ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ದೇಶದ ಅಟಾರ್ನಿ ಜನರಲ್ ಅವರಿಗೆ ಸಂಪೂರ್ಣ ತನಿಖೆ ಕೈಗೊಳ್ಳಲು ಆದೇಶಿಸಿದ್ದರು ಎಂದು ಮೂಲಗಳು ತಿಳಿಸಿವೆ. ಅಫ್ಘಾನ್ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಗೋಲ್‌ಕೀಪರ್‌ಗಳ ಮುಖ್ಯಸ್ಥ ಮತ್ತು ತಂಡದ ಪ್ರಾಂತೀಯ ಸಂಯೋಜಕ ಅಮಾನತುಗೊಂಡ ಅಧಿಕಾರಿಗಳು ಎಂದು ಅಫ್ಘಾನ್‌ನ ಅಟಾರ್ನಿ ಜನರಲ್ ಕಚೇರಿಯ ವಕ್ತಾರ ಜಂಶೀದ್ ರಸೂಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸಂಪೂರ್ಣ ತನಿಖೆ, ಸಾಕ್ಷ ಸಂಗ್ರಹ ಮತ್ತಿತರ ಪ್ರಕ್ರಿಯೆಗಳು ಸರಳವಾಗುವ ಉದ್ದೇಶದಿಂದ ಅಧಿಕಾರಿಗಳನ್ನು ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News