ಪೂಜಾರರನ್ನು ದ್ರಾವಿಡ್‌ಗೆ ಹೋಲಿಸಿದ ಚಾಪೆಲ್

Update: 2018-12-09 18:25 GMT

ಅಡಿಲೇಡ್, ಡಿ.9: ಚೇತೇಶ್ವರ ಪೂಜಾರ ಬ್ಯಾಟಿಂಗ್ ರಾಹುಲ್ ದ್ರಾವಿಡ್‌ರ ಶೈಲಿಯನ್ನು ಹೋಲುತ್ತಿದ್ದು, ಭಾರತದ ಬ್ಯಾಟಿಂಗ್‌ನ 3ನೇ ಕ್ರಮಾಂಕಕ್ಕೆ ಪೂಜಾರ ಮಾದರಿ ಆಯ್ಕೆ ಎಂದು ಆಸ್ಟ್ರೇಲಿಯದ ಮಾಜಿ ದಾಂಡಿಗ ಇಯಾನ್ ಚಾಪೆಲ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ಬರೆದಿರುವ ಅಂಕಣದಲ್ಲಿ ಈ ಕುರಿತು ವಿವರಿಸಿರುವ ಅವರು, ‘‘ಮಧ್ಯಮ ಕ್ರಮಾಂಕಕ್ಕೆ ಈ ಬಲಗೈ ಬ್ಯಾಟ್ಸ್‌ಮನ್ ಅತ್ಯಂತ ಸೂಕ್ತ ಆಯ್ಕೆ ಆಗಿದ್ದು, ಅವರ ತಾಳ್ಮೆ ಗಮನಾರ್ಹವಾದುದು. ಉತ್ತಮ ಟೆಸ್ಟ್ ತಂಡಕ್ಕೆ ನಂ.3 ದಾಂಡಿಗನನ್ನು ನೇಮಕ ಮಾಡುವಾಗ ಎರಡು ಆಯ್ಕೆಗಳಿರುತ್ತವೆ. ಒಬ್ಬ ಪ್ರಬಲ ಪ್ರತಿ ಆಕ್ರಮಣಕಾರ ಹಾಗೂ ತನ್ನ ಆಕ್ರಮಣಕಾರಿ ಮನೋಭಾವದ ಮಧ್ಯೆಯೂ ಹೊಸ ಚೆಂಡಿನ ಉತ್ತಮ ಸ್ಪೆಲ್‌ನ್ನು ಎದುರಿಸುವ ಚಾಕಚಕ್ಯತೆ ಇರಬೇಕು.ಇದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ಆಸೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್’’ಎಂದಿದ್ದಾರೆ.

ಅಂತಹ ಆಟಗಾರ ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ತಾಳ್ಮೆ ಹಾಗೂ ಪ್ರಬಲ ರಕ್ಷಣಾತ್ಮಕ ಆಟಗಾರನಾದರೂ ಇರಬೇಕು. ಈ ವಿಷಯದಲ್ಲಿ ಪೂಜಾರ, ದ್ರಾವಿಡ್ ಅವರನ್ನು ಹೋಲುತ್ತಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News