ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಏಶ್ಯದ ಮೊದಲ ನಾಯಕ

Update: 2018-12-10 09:19 GMT

ಅಡಿಲೇಡ್, ಡಿ.10:ಭಾರತ ಸೋಮವಾರ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 31 ರನ್‌ಗಳಿಂದ ರೋಚಕವಾಗಿ ಗೆದ್ದುಕೊಂಡು ಸರಣಿಯಲ್ಲಿ ಶುಭಾರಂಭ ಮಾಡಿದೆ. ಇದೇ ವೇಳೆ, ನಾಯಕ ವಿರಾಟ್ ಕೊಹ್ಲಿ ಅಪರೂಪದ ಸಾಧನೆ ಮಾಡಿದರು.

ಕೊಹ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕದಲ್ಲಿ ಟೆಸ್ಟ್ ಪಂದ್ಯದಲ್ಲಿ ಜಯ ದಾಖಲಿಸಿದ ಏಶ್ಯದ ಮೊದಲ ನಾಯಕ ಎನಿಸಿಕೊಂಡರು.

 ಭಾರತ 2008ರಲ್ಲಿ ಪರ್ತ್‌ನ ವಾಕಾ ಮೈದಾನದಲ್ಲಿ ಕೊನೆಯ ಬಾರಿ ್ಟ ಆಸ್ಟ್ರೇಲಿಯವನ್ನು ಸೋಲಿಸಿತ್ತು. ಇದರರ್ಥ ಅನಿಲ್ ಕುಂಬ್ಳೆ ಬಳಿಕ ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಭಾರತದ ಮೊದಲ ನಾಯಕ ಕೊಹ್ಲಿ. ಭಾರತ 2003ರಲ್ಲಿ ಸೌರವ್ ಗಂಗುಲಿ ನಾಯಕತ್ವದಲ್ಲಿ ಅಡಿಲೇಡ್ ಓವಲ್‌ನಲ್ಲಿ ಟೆಸ್ಟ್ ಪಂದ್ಯ ಜಯಿಸಿತ್ತು.

 ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯ ಜಯಿಸಿದ ಏಶ್ಯದ 2ನೇ ತಂಡವಾಗಿದೆ. 1979ರಲ್ಲಿ ಪಾಕಿಸ್ತಾನ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿತ್ತು.

*ವಿರಾಟ್ ಕೊಹ್ಲಿ 2008ರ ಬಳಿಕ ಆಸ್ಟ್ರೇಲಿಯ ನೆಲದಲ್ಲಿ ಟೆಸ್ಟ್ ಪಂದ್ಯ ಜಯಿಸಿದ ಭಾರತದ ಮೊದಲ ನಾಯಕ.

*ಭಾರತ 2011-12ರಲ್ಲಿ 0-4 ಅಂತರದಿಂದಲೂ, 2014-15ರಲ್ಲಿ 0-2 ಅಂತರದಿಂದಲೂ ಆಸ್ಟ್ರೇಲಿಯ ವಿರುದ್ಧ ಸರಣಿ ಸೋತಿತ್ತು. *‘ಕಿಂಗ್’ ಕೊಹ್ಲಿ ಆಸ್ಟ್ರೇಲಿಯದಲ್ಲಿ ಆಸೀಸ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಜಯಿಸಿದ ಭಾರತದ ಪ್ರಥಮ ನಾಯಕ.

ಕೊಹ್ಲಿ ನಾಯಕನಾಗಿ 43 ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದು, 20 ಬಾರಿ ಟಾಸ್ ಜಯಿಸಿದ್ದಾರೆ. ಈ ಪೈಕಿ 17 ಸಲ ಜಯ ಸಾಧಿಸಿದ್ದಾರೆ. 3 ಪಂದ್ಯ ಡ್ರಾಗೊಂಡಿದೆ. ಒಟ್ಟಾರೆ ಭಾರತ ಕೊಹ್ಲಿ ನಾಯಕತ್ವದಲ್ಲಿ 43 ಟೆಸ್ಟ್‌ನಲ್ಲಿ 25 ಗೆಲುವು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News