7000 ಕೋ. ರೂ. ವಸೂಲಿಗೆ ನೀರವ್ ಮೋದಿ, ಕುಟುಂಬಕ್ಕೆ ಡಿಆರ್‌ಟಿ ನೋಟಿಸ್

Update: 2018-12-10 14:41 GMT

ಮುಂಬೈ, ಡಿ. 10: ರೂ. 7,000 ಕೋಟಿ ವಸೂಲಾತಿಗೆ ಸಾಲ ವಸೂಲಾತಿ ನ್ಯಾಯಾಧಿಕರಣ (ಡಿಆರ್‌ಟಿ) ದೇಶದಿಂದ ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿ, ಅವರ ಕುಟುಂಬ ಹಾಗೂ ಅವರ ಕಂಪೆನಿಗೆ ನೋಟಿಸು ಜಾರಿ ಮಾಡಿದೆ.

7.029 ಕೋಟಿ ರೂಪಾಯಿ ವಸೂಲು ಮಾಡುವಂತೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಜುಲೈಯಲ್ಲಿ ನ್ಯಾಯಾಧಿಕರಣದ ಮೆಟ್ಟಿಲೇರಿತ್ತು. ಇದಾದ 6 ತಿಂಗಳ ಬಳಿಕ ಡಿಆರ್‌ಡಿ-1 ರಿಜಿಸ್ಟ್ರಾರ್ ಎ. ಮುರಳಿ ಅವರು ನೋಟಿಸು ಜಾರಿ ಮಾಡಿದ್ದಾರೆ. ಆರೋಪಿಯಾಗಿರುವ ನೀರವ್ ಮೋದಿ ಹಾಗೂ ಇತರರು ಸುರಕ್ಷಿತ ಆಸ್ತಿಗೆ ಸಂಬಂಧಿಸಿದ ವಿಲೇವಾರಿ, ವರ್ಗಾವಣೆ ಅಥವಾ ಯಾವುದೇ ವ್ಯವಹಾರವನ್ನು ನಿಷೇಧಿಸಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಡಿಆರ್‌ಟಿ ನೋಟಿಸಿಗೆ ಪ್ರತಿಕ್ರಿಯೆ ನೀಡಲು ಅವರಿಗೆ 2019 ಜನವರಿ 15ರ ವರೆಗೆ ಕಾಲಾವಕಾಶ ನೀಡಲಾಗಿದೆ. ಇದಕ್ಕೆ ವಿಫಲವಾದರೆ, ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಪರವಾಗಿ ತೀರ್ಪು ನೀಡಲಾಗುವುದು ಎಂದು ಡಿಆರ್‌ಟಿ ನೋಟಿಸು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News