ಊರ್ಜಿತ್ ಪಟೇಲ್ ರಾಜೀನಾಮೆಯಿಂದ ದೇಶ, ಆರ್ಥಿಕತೆಗೆ ಕೆಡುಕಾಗಲಿದೆ: ಸುಬ್ರಮಣಿಯನ್ ಸ್ವಾಮಿ

Update: 2018-12-10 16:48 GMT

ಹೊಸದಿಲ್ಲಿ, ಡಿ.10: ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆ ನಿರ್ಧಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೇಶದ ಆರ್ಥಿಕತೆಗೆ ಈ ನಿರ್ಧಾರ ಕೆಟ್ಟದ್ದು ಎಂದು ಹೇಳಿದ್ದಾರೆ.

“ದೇಶದ ಆರ್ಥಿಕತೆ, ಆರ್ ಬಿಐ ಹಾಗು ಸರಕಾರಕ್ಕೆ ಅವರ ರಾಜೀನಾಮೆಯು ಕೆಡುಕನ್ನು ಮಾಡಬಹುದು. ಮುಂದಿನ ಸರಕಾರ ಅಧಿಕಾರಕ್ಕೆ ಬರುವ ಜುಲೈವರೆಗೆ ಅವರು ಮುಂದುವರಿಯಬೇಕಿತ್ತು. ಪ್ರಧಾನಿ ಮೋದಿಯವರು ಈ ಬಗ್ಗೆ ಮಧ್ಯಪ್ರವೇಶಿಸಬೇಕು” ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

“ಆರ್ ಬಿಐ ಗವರ್ನರ್ ರಾಜೀನಾಮೆ ಸುದ್ದಿ ಕೇಳಿ ಆಶ್ಚರ್ಯವಾಗಿದೆ. ಹಿಂದಿನ ಸಭೆಯು ಒಳ್ಳೆಯ ರೀತಿಯಲ್ಲಿ ನಡೆದಿದ್ದರೂ ಈ ನಿರ್ಧಾರದಿಂದ ಆಘಾತವಾಗಿದೆ” ಎಂದು ಆರ್ ಬಿಐ ಕೇಂದ್ರ ಮಂಡಳಿ ಸದಸ್ಯ ಎಸ್. ಗುರುಮೂರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News