ಜಾರ್ಖಂಡ್‌ನಲ್ಲಿ ಬರದಿಂದ ಬೆಳೆಹಾನಿ: ದೃಢಪಡಿಸಿದ ಕೇಂದ್ರದ ತಂಡ

Update: 2018-12-10 16:52 GMT

ರಾಂಚಿ,ಡಿ.10: ಜಾರ್ಖಂಡ್‌ನ ಏಳು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರದ ತಂಡವು ರಾಜ್ಯದಲ್ಲಿ ಬರದಿಂದಾಗಿ ಬೆಳೆಹಾನಿಯುಂಟಾಗಿರುವುದನ್ನು ದೃಢಪಡಿಸಿದೆ.

ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಆತಿಷ್ ಚಂದ್ರ ನೇತೃತ್ವದ ತಂಡವು ಸೋಮವಾರ ದಿಲ್ಲಿಗೆ ಮರಳುವ ಮುನ್ನ ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿತು.

ತಂಡವು ಕೆಲವು ಹೆಚ್ಚಿನ ಮಾಹಿತಿಗಳನ್ನು ಕೋರಿದ್ದು,ಅವುಗಳನ್ನು ಒದಗಿಸಲಾಗುವುದು ಎಂದು ಜಾರ್ಖಂಡ್‌ನ ಮುಖ್ಯ ಕಾರ್ಯದರ್ಶಿ ಸುಧೀರ ತ್ರಿಪಾಠಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಜಾರ್ಖಂಡ್ ಸರಕಾರವು ಕೋರಿರುವ 818 ಕೋ.ರೂ.ಪರಿಹಾರ ನಿಧಿಯನ್ನು ಬಿಡುಗಡೆಗೊಳಿಸುವಂತಾಗಲು ತಂಡವು ತನ್ನ ವರದಿಯನ್ನು 10 ದಿನಗಳಲ್ಲಿ ಕೃಷಿ ಸಚಿವಾಲಯಕ್ಕೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿದವು.

ಜಾರ್ಖಂಡ್ ಸರಕಾರವು ಈಗಾಗಲೇ ರಾಜ್ಯದ 18 ಜಿಲ್ಲೆಗಳ 216 ಬ್ಲಾಕ್‌ಗಳನ್ನು ಬರಪೀಡಿತ ಎಂದು ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News